ಬೆಳ್ತಂಗಡಿ; ಚಾರ್ಮಾಡಿಯಲ್ಲಿ ರವಿವಾರ ಸಂಜೆ ಯಾತ್ರಾರ್ಥಿಗಳ ಕಾರೊಂದು ಧರೆಗೆ ಗುದ್ದಿ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಆಂದ್ರಪ್ರದೇಶದ ಮೂಲದ ಯಾತ್ರಾರ್ಥಿಗಳಾಗಿರುವ ಇವರು ಧರ್ಮಸ್ಥಳಕ್ಕೆ ತೀರ್ಥಯಾತ್ರೆ ಗೆಂದು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಧರೆಗೆ ಗುದ್ದಿದೆ. ಅಪಘಾತ ವಿವರ ತಿಳಿದ ತಕ್ಷಣ ಸಿನಾನ್ ಚಾರ್ಮಾಡಿ ಅವರು ತಮ್ಮ ಸ್ವಂತ ವಾಹನದಲ್ಲಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಸಿದ್ದಾರೆ.
ಅವರ ಜೊತೆ ಸ್ಥಳೀಯರಾದ ಸಿದ್ದೀಕ್ ಬ್ರೈಟ್, ಮನ್ಸೂರ್ ಮತ್ತು ರಿಯಾಝ್ ಹಾಗೂ ಊರವರು ಸಹಕಾರ ನೀಡಿದ್ದಾರೆ.