Posts

ಇಳಂತಿಲ: 132 ಮಂದಿಯಿಂದ ಸ್ವಯಂ ಪ್ರೇರಿತ ರಕ್ತದಾನ ರಕ್ತದಾನಗೈಯುವ ಸಂಸ್ಕೃತಿ ರೂಡಿಯಾಗಲಿ; ಡಾ. ರಾಜಾರಾಮ್, ಕೆ.ಬಿ

1 min read

ಬೆಳ್ತಂಗಡಿ;  ಬಿಸಿ ರಕ್ತದ ಯುವ ಜನತೆ ಯಾರದೋ ಮಾತಿಗೆ ಮರುಳಾಗಿ ರಕ್ತಚೆಲ್ಲುವ ಸಂಸ್ಕೃತಿಯ ಕಡೆ ಮಾಲದೆ ರಕ್ತದಾನಗೈಯುವ ಮೂಲಕ ಜೀವದಾನಕ್ಕೆ ಮುಂದಾಗಬೇಕು.  ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಡಾ. ರಾಜಾರಾಮ ಕೆ.ಬಿ ಹೇಳಿದರು.

ಅವರು ಮೇ 28 ರಂದು ಉಪ್ಪಿನಂಗಡಿಯ ಎಚ್. ಎಮ್ ಆಡಿಟೋರಿಯಂ ನಲ್ಲಿ ,  ಸೌಹಾರ್ದ ಸಮಿತಿ (ರಿ) ಇಳಂತಿಲ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಮತ್ತು ಬ್ಲಡ್ ಡೋನರ್ಸ್ (ರಿ) ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಸೌಹಾರ್ದ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮನೋಹರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಇಳಂತಿಲ ಗ್ರಾಮ ಪಂಚಾಯತ್ ಅದ್ಯಕ್ಷೆ ಚಂದ್ರಿಕಾ ಭಟ್,‌  ಎಸ್ಕೆಎಸ್‌ಎಸ್‌ಎಫ್ ವಿಕಾಯದ  ಜಿಲ್ಲಾ ಚೇರ್ಮನ್ ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಹಾಜಿ ಕೆಂಪಿ, ಉಪ್ಪಿನಂಗಡಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಬ್ರಾಗ್ಸ್ ಎನ್ಮಾಡಿ, ಉಪ್ಪಿನಂಗಡಿ ಸಹಕಾರಿ‌ ಸಂಘದ ಅಧ್ಯಕ್ಷ ಕೆ.ವಿ ಪ್ರಸಾದ್, ಜೋಗಿಬೆಟ್ಟು ಮಸೀದಿ ಅಧ್ಯಕ್ಷ ಝಕರಿಯಾ ಅಗ್ನಾಡಿ, ಕರ್ನಾಟಕ‌ ಮುಸ್ಲಿಂ ಜಮಾಅತ್ ಸಹಾಯ್  ಉಪ್ಪಿನಂಗಡಿ ಸೆಕ್ಷನ್ ನ ಪ್ರಮುಖರಾದ ಅಬ್ದುಲ್ ಲತೀಫ್,  ತಾ.ಪಂ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಇಳಂತಿಲ ಗ್ರಾ.ಪಂ ಸದಸ್ಯರುಗಳಾದ ಯು. ಕೆ ಇಸುಬು, ವಸಂತ ಶೆಟ್ಟಿ, ತಣ್ಣೀರುಪಂಥ ಗ್ರಾ.ಪಂ ಸದಸ್ಯರುಗಳಾದ  ಜಯವಿಕ್ರಂ ಕಲ್ಲಾಪು, ಆಯೂಬ್ ಡಿ.ಕೆ,  ಇಳಂತಿಲ ಗ್ರಾ.ಪಂ ಮಾಜಿ  ಸದಸ್ಯರಾದ ಯು.ಟಿ ಫಯಾಜ್ ಅಹಮದ್, ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ, ಇಳಂತಿಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ, ಸೌಹಾರ್ದ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ವಿರ್ ಯು.ಟಿ ಮುಂತಾದವರು ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಮತ್ತು ಗ್ರಾಮ ಪಂಚಾಯತ್ ಕೊರೋನಾ  ಟಾಸ್ಕ್ ಪೋರ್ಸ್ ಸಮಿತಿಗೆ ಸೌಹಾರ್ದ ಸಮಿತಿ ವತಿಯಿಂದ ವಿಟಾಮಿನ್ ಸಿ ಮಾತ್ರೆ ಖರೀದಿ ಬಗ್ಗೆ ಧನ ಸಹಾಯ ನೀಡಲಾಯಿತು. 

ಗ್ರಾ.ಪಂ ಸದಸ್ಯ ಯು.ಕೆ ಇಸುಬು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ವಂದಿಸಿದರು. ಬೆಳ್ತಂಗಡಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವ ಕುಮಾರ್ ಎಸ್. ಎಂ ಕಾರ್ಯಕ್ರಮ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment