Posts

ಗರ್ಡಾಡಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ್ದ ವ್ಯಕ್ತಿ‌ ಜೀವಂತವಾಗಿ ಮರಳಿದಾಗ! ಕುಲ್ಲುಂಜ ಕೆರೆಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಯಾರು ಎಂಬುದೇ ಈಗ ನಿಗೂಢ

1 min read

ಬೆಳ್ತಂಗಡಿ: ಇಲ್ಲಿಯ ಗರ್ಡಾಡಿ ಗ್ರಾಮದಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಶ್ರೀನಿವಾಸ ದೇವಾಡಿಗ (60.ವ) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕೆರೆಯೊಂದರಲ್ಲಿ ಪತ್ತೆಯಾಗಿದ್ದುದನ್ನು ಪತ್ತೆ ಹಚ್ಚಿ ಮನೆಯವರು ಅವರ ಅಂತ್ಯಸಂಸ್ಕಾರ ವಿಧಿಗಳನ್ನು ನೆರವೇರಿಸಿದ್ದರಾದರೂ ಇದೀಗ ಅದೇ ವ್ಯಕ್ತಿ ಮತ್ತೆ ಊರಿಗೆ ಮರಳಿದ್ದಾರೆ.!

ಘಟನೆ ಬೆಳಕಿಗೆ ಬಂದು, ಕೆರೆಯಲ್ಲಿ ಗುರುತು ಪರಿಚಯ ಸಿಗದಷ್ಟು ಕೊಳೆತು ಹೋಗಿದ್ದ ದೇಹವನ್ನು ಶ್ರೀನಿವಾಸ ಅವರ ಕುಟುಂಬದವರು ಅಂತ್ಯಸಂಸ್ಕಾರ ನಡೆಸಿದ್ದರು.

ಆದರೆ 10 ದಿನಗಳ ಬಳಿಕ ಆ   ವ್ಯಕ್ತಿ ಜೀವಂತವಾಗಿ ಊರಿಗೆ ಮರಳಿದ್ದು ಎಲ್ಲರಲ್ಲೂ ಆಶ್ಚರ್ಯ ತಂದಿದೆ.



ಅಂದು ಕೆರೆಯಲ್ಲಿ ಸಿಕ್ಕಿದ್ದ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

......

ಗರ್ಡಾಡಿ ನಿವಾಸಿ ಶ್ರೀನಿವಾಸ ದೇವಾಡಿಗ (60.ವ) ಜ. 26 ರಂದು ಕಾಣೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರ ಮಕ್ಕಳು ನಾಪತ್ತೆ ದೂರು ಸಲ್ಲಿಸಿದ್ದರು.

ಅಂತೆಯೇ  ಪ್ರಕರಣ‌ ಕೂಡ ದಾಖಲಾಗಿತ್ತು. ಆದರೆ ಒಂದು ವಾರದ ಬಳಿಕ ಕಳೆದ ಫೆ.3 ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜ ಕೆರೆಯಲ್ಲಿ ಅಪರಿಚಿತ  ಶವವೊಂದು ತೇಲುತ್ತಿರುವುದು ಪತ್ತೆಯಾಗಿತ್ತು. ಇದು ನಾಪತ್ತೆಯಾದ ಶ್ರೀನಿವಾಸರದ್ದಿರಬೇಕು ಎಂಬ ಸುದ್ದಿ ಹರಡಿತ್ತು. ಆ ಪ್ರಕಾರ ಮುಂದಿನ ಕಾನೂನು ಕ್ರಮಗಳು ಜರುಗಿದ್ದವು.

ಇದೀಗ ಮನೆಯವರು ಅವರ ಉತ್ತರಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವಂತೆ ಅದೇ ವ್ಯಕ್ತಿ ಜೀವಂತ ಇರುವುದು ಬೆಳಕಿಗೆ ಬಂದಿದೆ.

ಕುಡಿತದ ಚಟ ಅಂಟಿಸಿಕೊಂಡಿದ್ದ ಶ್ರೀನಿವಾಸ ಅವರು ಸಹೋದರನ ಮನೆಯಲ್ಲಿ ನೆಲೆಸಿದ್ದರು. ಹಲವು ಬಾರಿ ಮನೆಯಿಂದ ಹೊರಹೋಗುತ್ತಿದ್ದ ಅವರು ವಾರಗಳ ಕಾಲ ಮನೆಗೆ ವಾಪಾಸಾಗದೆ ಎಲ್ಲೆಂದರಲ್ಲಿ ತಿರುಗಾಡುತ್ತಾ, ಸಿಕ್ಕ ಸಿಕ್ಕಲ್ಲಿ‌ಮಲಗಿ ನಿದ್ರಿಸುತ್ತಿದ್ದರು. ಅವರಿಗೆ ಮನಸಾದಾಗ ಮತ್ತೆ ಮನೆಗೆ ಮರಳುತ್ತಿದ್ದರು. ಹಿಂದೆ ಹಲವು ಬಾರಿ ಹೀಗೇ ಹೋಗಿದ್ದ‌ ಅವರು ಬಳಿಕ ಮನೆಗೆ ಮರಳಿದ್ದರು. ಆದರೆ ಈ ಬಾರಿ ಕೆರೆಯಲ್ಲಿ‌ದೇಹ ಸಿಕ್ಕಿದಾಗ ಮನೆಯವರು ಮತ್ತು ಊರವರೆಲ್ಲರೂ, ಅದೇ ವ್ಯಕ್ತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಾಣ ಬಿಟ್ಟಿರಬಹುದೆಂದು ಅಂದುಕೊಂಡಿದ್ದರು.

ಆದರೆ ಇದೀಗ ಪ್ರಕರಣದಲ್ಲಿ‌ಸಿಕ್ಕಿದ ಮೃತದೇಹ ಯಾರದ್ದು ಎಂಬ ಬಗ್ಗೆ ಪೊಲೀಸರಿಗೆ ತಲೆನೋವು ಪ್ರಾರಂಭವಾಗಿದೆ.


ಮಂಗಳೂರಿನಲ್ಲಿದ್ದ ಶ್ರೀನಿವಾಸ ದೇವಾಡಿಗ;

ಶ್ರೀನಿವಾಸ ದೇವಾಡಿಗ  ಅವರು ಮಂಗಳೂರಿನಲ್ಲಿ ಇದ್ದಾರೆ ಎಂಬ ಬಗ್ಗೆ ಮನೆಯವರಿಗೆ ಮಾಹಿತಿಯೊಂದು ಬಂದಿತ್ತು. ಅವರ ಪತ್ನಿಯ ಮನೆ ಮಂಗಳೂರಿನಲ್ಲಿರುವುದರಿಂದ ತಕ್ಷಣ ಅವರೂ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಅವರು  ಪತ್ತೆಯಾದರು.

ಅವರನ್ನು ಕೂಡಲೇ ಬೆಳ್ತಂಗಡಿ ಠಾಣೆಗೆ ಹಾಜರುಪಡಿಸಿ‌ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ಅವರ ನಾಪತ್ತೆ ಪ್ರಕರಣವನ್ನು ಅಂತ್ಯ ಗೊಳಿಸಲಾಯಿತು.

 ಇದೀಗ ಅವರನ್ನು ಮಂಗಳೂರು ನಲ್ಲಿರುವ ಪತ್ನಿಯ ಮನೆಗೆ  ಕಳುಹಿಸಿಕೊಡಲಾಗಿದೆ. ಇತ್ತ‌ ಕೆರೆಯಲ್ಲಿ ಸಿಕ್ಕಿದ ಮೃತದೇಹದ ಹುಡುಕಾಟಕ್ಕೆ ಪೊಲೀಸ್ ತನಿಖೆ ಆರಂಭವಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment