Posts

ಧರ್ಮಸ್ಥಳ ನೇತ್ರಾವತಿ ಸ್ನಾಗಘಟ್ಟದ ಬಳಿ ಅಪರಿಚಿತ ಮಹಿಳೆಯರಿಬ್ಬರ ಶವ ಪತ್ತೆ

0 min read

 







ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಗುರುವಾರ ಪತ್ತೆಯಾಗಿದೆ.

ಅಂದಾಜು 40 ರಿಂದ 45 ವರ್ಷ  ಮತ್ತು 20 ರಿಂದ 25 ವರ್ಷ ಪ್ರಾಯದ ಅಪರಿಚಿತ ಮಹಿಳೆಯರ ಮೃತದೇಹ ಇದಾಗಿದೆ. 

ಸ್ನಾನ ಘಟ್ಟದ ಸಿಬ್ಬಂದಿ ಕುಲೆಂಜಿಲೋಡಿ ನಿವಾಸಿ ಜಯಂತ ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಮೃತದೇಹ ಇರುವುದಾಗಿ ತಿಳಿಸಿದಂತೆ ಸ್ಥಳಕ್ಕೆ ತೆರಳಿ ನೋಡಿದಾಗ ಎರಡೂ ಮೃತದೇಹಗಳು ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.‌

ಈ ಬಗ್ಗೆ ಅವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಇಬ್ಬರು ಅಪರಿಚಿತ ಮಹಿಳೆಯರು  ಯಾವುದೋ ಕಾರಣಕ್ಕೆ ನೀರಿಗೆ ಹಾರಿ ಅಥವಾ ಕಾಲು ಜಾರಿ ಬಿದ್ದು  ಮೃತ ಪಟ್ಟಿರಬಹುದು ಎಂಬ ಸಂದೇಹವಿದ್ದು, ಅವರ ವಿಳಾಸ ಪತ್ತೆ ಮತ್ತು ಮುಂದಿನ ತನಿಖೆಗಾಗಿ ಧರ್ಮಸ್ಥಳ ಪೊಲೀಸರು ಪ್ರಕ್ರೀಯೆ ಆರಂಭಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment