Posts

ಅಂಗಳದಿಂದ ಅಡಿಕೆ ಕದ್ದು ಕಾಡಿನಲ್ಲಿ ಸುಲಿದು ಮಾರುಕಟ್ಟೆಗೆ! ಮೂವರ ಬಂಧನ, ಮಾರುತಿ ಕಾರು ವಶಕ್ಕೆ

1 min read



ಬೆಳ್ತಂಗಡಿ: ಅಂಗಣದಲ್ಲಿ ಒಣಗಲು ಹಾಕುತ್ತಿದ್ದ ಅಡಿಕೆಯನ್ನು ಕದ್ದು ಅದನ್ನು ಜನರಹಿತ ಗುಡ್ಡವೊಂದರಲ್ಲಿ ಸುಲಿದು ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದ ಮೂವರು ಕಳ್ಳರನ್ನು ಪುಂಜಾಲಕಟ್ಟೆ ಪೊಲೀಸರು ಡಿ.24 ರಂದು ತಮ್ಮ ಬಲೆಗೆ ಕೆಡವಿದ್ದಾರೆ.

ಬಂಧಿತರು ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಕೊಂಬಿನಡ್ಕ‌ ಮನೆಯ ನಿವಾಸಿಗಳಾದ ಮುಹಮ್ಮದ್ ಅಶ್ರಫ್ (22ವ.) ಮತ್ತು ನೌಮಾನ್ ( 20ವ.) ಹಾಗೂ ತೆಕ್ಕಾರು‌ ಗ್ರಾಮದ ಮುಳಿಪಡ್ಪು ಮನೆಯ ಮುಹಮ್ಮದ್ ಶಹೀದ್(20ವ.) ಎಂಬವರಾಗಿದ್ದಾರೆ.

ಪುಂಜಾಲಕಟ್ಟೆ ಠಾಣಾ ಎಸ್‌.ಐ ಸೌಮ್ಯಾ ಅವರು ಕರ್ತವ್ಯದಲ್ಲಿದ್ದ ವೇಳೆ ಮಚ್ಚಿನ ಗ್ರಾಮದಲ್ಲಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.‌ಪರಾರಿಯಾಗಿದ್ದ ಇನ್ನೊಬ್ಬಾತ ಆರೋಪಿಯನ್ನು ಬಳಿಕ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಿಂದ 50 ಸಾವಿರ ರೂ. ಮೌಲ್ಯದ, ಸಿಪ್ಪೆ ಸುಲಿಯದ 15   ಮೂಟೆ ಅಡಿಕೆ , ಕಳ್ಳತನಕ್ಕೆ  ಬಳಸಿದ ಮಾರುತಿ ಕಾರು ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮುಂಡಾಜೆ ಗ್ರಾಮದ ಸೋಮಂತಡ್ಕ ತಿರುವು ನಿವಾಸಿ ಅಬ್ದುಲ್ ಹಮೀದ್ ಅವರ ಅಂಗಳದಿಂದ ಈ ಅಡಿಕೆಯನ್ನು ಕದ್ದು ತಂದಿದ್ದರೆಂದು ತನಿಖೆಯ ವೇಳೆ ಗೊತ್ತಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅವರು ಅಡಿಕೆ ಕಳವು ದೂರು ನೀಡಿದ್ದರು.  ಈ ಮಧ್ಯೆ ಮಚ್ಚಿನ ಗ್ರಾಮದ ದೇವರಪಲ್ಕೆ ಪುಂಚಪಾದೆ ಎಂಬಲ್ಲಿನ ಜನರ ಓಡಾಟ ಕಡಿಮೆ ಇರುವ ಸಾರ್ವಜನಿಕ ಪ್ರದೇಶದಲ್ಲಿ ಯುವಕರು ಅಡಿಕೆ ಸಿಪ್ಪೆ ತೆಗೆಯುತ್ತಿದ್ದ ಬಗ್ಗೆ ಊರವರಿಗೆ ಮಾಹಿತಿ ಲಭಿಸಿ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು.

ಅಡಿಕೆಗೆ ಬೆಲೆ ದಿನದಿಂದ  ದಿನಕ್ಕೆ ಏರುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಯುವಕರು ಕಳ್ಳತನದ ಹೊಸ ಮಾರ್ಗ ಕಂಡುಕೊಂಡಿದ್ದರೆಂದು ಹೇಳಲಾಗಿದೆ. ಕಳೆದ ಒಂದೂವರೆ ತಿಂಗಳುಗಳಿಂದ ತಾಲೂಕಿನ ಹಲವೆಡೆ ಅಡಿಕೆ ಕಳ್ಳತನ ನಡೆಯುತ್ತಿತ್ತೆನ್ನಲಾಗಿದ್ದು ಆರೋಪಿಗಳು ಪತ್ತೆಯಾಗುತ್ತಿರಲಿಲ್ಲ.‌ ಆ ಕಳ್ಳತನಗಳಿಗೂ ಈ ಆರೋಪಿಗಳಿಗೂ ಸಂಬಂಧವಿದೆಯೇ ಎಂದು ಮುಂದಕ್ಕೆ ತಿಳಿದುಬರಲಿದೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ;

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment