ಬೆಳ್ತಂಗಡಿ; ಇಲ್ಲಿನ ಸೋಮಾವತಿ ನದಿಯಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದಿಂದ ಹುಡುಕಾಟ ಆರಂಭವಾಗಿದೆ.
ನಿನ್ನೆಯೇ ಇಬ್ಬರು ಮೀನು ಹಿಡಿಯಲು ಹೊಳೆಗೆ ಬದಿ ಬಂದಿದ್ದರೆಂದು ಹೇಳಲಾಗಿದೆ. ಇಬ್ಬರೂ ಉಜಿರೆ ಕಡೆಯವರೆಂದು ಗೊತ್ತಾಗಿದ್ದು ಅವರು ತಂದಿದ್ದ ಬಲೆ, ಮೊಬೈಲ್ ಫೋನ್ ಮತ್ತು ಪರಿಕರಗಳು ಹೊಳೆಯ ಬದಿ ಪತ್ತೆಯಾಗಿದೆ. ಇದರಿಂದಾಗಿ ಅವರಿಬ್ಬರೂ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆಯೇ ಎಂಬ ಬಲವಾದ ಶಂಕೆ ಮೂಡಿದೆ.