Posts

ಅಪಹರಣ ಪ್ರಕರಣ ಆರೋಪಿಗಳಿಗೆ ಜ.6 ರ ವರೆಗೆ ನ್ಯಾಯಾಂಗ ಬಂಧನ

1 min read

ಬೆಳ್ತಂಗಡಿ; ಉಜಿರೆಯ ಉದ್ಯಮಿ ಬಿಜೊಯ್ ಎ‌.ಜೆ ಅವರ ಪುತ್ರ ಅನುಭವ್ ಅವರ ಅಪಹರಣ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಪೊಲೀಸ್ ಕಷ್ಟಡಿಯಲ್ಲಿದ್ದ 6 ಮಂದಿ ಆರೋಪಿಗಳನ್ನು ಡಿ.24 ರಂದು ಮತ್ತೆ ನ್ಯಾಯಾಲಯ ಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ಜ.6 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳಾದ ಮಂಡ್ಯ ದೇವಳಕೆರೆ ಗ್ರಾಮದ ರಂಜಿತ್(22ವ.), ಮಂಡ್ಯ ಕೋಡಿಕೆರೆ ಗ್ರಾಮದ ಹನುಮಂತು(21ವ.), ಮೈಸೂರು ವಡಂತಹಳ್ಳಿ ಗ್ರಾಮದ ಗಂಗಾಧರ (25ವ.), ಬೆಂಗಲಕೂರಿ ದೊಡ್ಡಮ್ಮನ ಹಳ್ಳದ ಕಮಲ್ ( 22ವ.), ಮಾಲೂರು ಕೂರ್ನ ಹೊಸಹಳ್ಳಿಯ ಮಂಜುನಾಥ(24ವ.) ಮತ್ತು ಮಹೇಶ್ (26ವ.) ಎಂಬವರು ಇದೀಗ ಮಂಗಳೂರಿನ‌ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀ‌ನ ಕೈದಿಗಳಾಗಿ ಬಂಧಿಯಾಗಿದ್ದಾರೆ.

ಪ್ರಕರಣದ ತನಿಖಾಧಿಕಾರಿ, ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ತಂಡ ಈ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೋಲಾರದಲ್ಲಿ ಸ್ಥಳ ಮಹಜರು;

ಐದು ದಿನಗಳ ಪೊಲೀಸ್ ಕಷ್ಟಡಿಯಲ್ಲಿದ್ದ ಬಂಧಿತ ಆರೋಪಿಗಳನ್ನು ಸ್ಥಳ ಮಹಜರು ಪ್ರಕ್ರೀಯೆಗಾಗಿ ಕೋಲಾರದ ಕೂರ್ನಹಳ್ಳಿಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕರೆದುಕೊಂಡು ಹೋಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಹಜರು ನಡೆಸಲಾಗಿದೆ.

ಇನ್ನಿಬ್ಬರು ಆರೋಪಿಗಳು ಬಂಧನಕ್ಕೆ ಬಾಕಿ;

ಪ್ರಕರಣದಲ್ಲಿ ಈಗಾಗಲೇ ಆರು ಮಂದಿ ಆರೋಪಿಗಳನ್ನು ಮೊದಲ ಹಂತದಲ್ಲಿ ಪೊಲೀಸರು ಸೆದೆಡಿದಿದ್ದಾರೆ. ಅವರ ವಿಚಾರಣೆ ವೇಳೆ ಈ ಪ್ರಕರಣದ ಪ್ರಮುಖ ಆರೋಪಿ ಮತ್ತು ಇನ್ನೋರ್ವಾತನ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಅವರ ಬಂಧನಕ್ಕಾಗಿ ತನಿಖಾ ತಂಡ ಕಾರ್ಯಪ್ರವೃತರಾಗಿದೆ.

ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮೊದಲಹಂತದ ಗ್ರಾ.ಪಂ ಚುನಾವಣೆ ಇದ್ದುದರಿಂದ ಅಗತ್ಯ ಚುನಾವಣಾ ಕರ್ತವ್ಯಕ್ಕಾಗಿ ತಂಡ ತನಿಖಾ ವಾಪಾಸು ಮರಳಿದ್ದುದರಿ‌ಂದ ಆರೋಪಿಗಳಿಬ್ಬರ ಬಂಧನಕ್ಸಂದೇಶ್ ಪಿ.ಜಿ ತಿಳಿಸಿದ್ದಾರೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment