ಬೆಳ್ತಂಗಡಿ : ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ರಾತ್ರಿ 10 ಗಂಟೆಗೆ ನಡೆದಿದೆ.
ಮೃತರನ್ನು ರಬ್ಬರ್ ಟ್ಯಾಪರ್ ವೃತ್ತಿನಿರತರು ಎಂದು ಗುರುತಿಸಲಾಗಿದೆ. ಸಹಸವಾರ ಬದ್ಯಾರು ಬರಾಯ ನಿವಾಸಿ
ಲೋಕೇಶ್ ಗೌಡ ಎಂದು ಆರಂಭಿಕ ಮಾಹಿತಿ ತಿಳಿದುಬಂದಿದೆ.
ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಗುದ್ದಿ ಈ ಅವಘಡ ನಡೆದುದಾಗಿದೆ.
ಗಾಯಾಳು ಲೋಕೇಶ್ ಗೌಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ವ್ಯಕ್ತಿಯ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಅಪಘಾತ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇವರು ಮರಣಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸಾಗುತ್ತಿದ್ದರೆಂದು ಹೇಳಲಾಗಿದ್ದು ಈ ಬಗ್ಗೆ ಇನ್ನೂ ಖಚಿತಗೊಂಡಿಲ್ಲ.