ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಮುಬಾರಕ್ ಪ್ರಯುಕ್ತ ಆರಂಭದಿಂದ ಫೆ. 13 ರ ವರೆಗೆ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ತಂಪು ಪಾನೀಯ ವಿತರಣೆಯ ಪ್ರತ್ಯೇಕ ವಿಭಾಗಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸುಮಾರು 2.5 ಲಕ್ಷ ರೂ. ಖರ್ಚು ತಗಲುವ ಈ ಕಾರ್ಯಯೋಜನೆಯ ಸಂಪೂರ್ಣ ಪ್ರಾಯೋಜಕತ್ವ ಮತ್ತು ಅದರ ನಿರ್ವಹಣೆಯನ್ನು ದಿಡುಪೆ ಜಮಾಅತ್ ಮತ್ತು ಯಂಗ್ ಮೆನ್ಸ್ ಕಮಿಟಿ ನಿರ್ವಹಿಸಲಿದೆ.
ಪಾನೀಯ ವ್ಯವಸ್ಥೆಗೆ ಸಯ್ಯಿದ್ ಕಾಜೂರು ತಂಙಳ್ ದುಆ ಆಶೀರ್ವಚನದ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ. ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಕಿಲ್ಲೂರು ಮಸ್ಜಿದ್ ಪ್ರಮುಖರಾದ ಅಬೂಬಕ್ಕರ್ ಮಲ್ಲಿಗೆಮನೆ, ಕಾಜೂರು ಉಪಾಧ್ಯಕ್ಷರಾದ ಬದ್ರುದ್ದೀನ್ ಮತ್ತು ಅಬ್ದುಲ್ ರಹಿಮಾನ್, ಕಾಜೂರು ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ, ದಿಡುಪೆ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎ.ಯು ಮುಹಮ್ಮದ್ ಆಲಿ, ಯಂಗ್‌ಮೆನ್ಸ್ ಅಧ್ಯಕ್ಷ ಹಂಝ ಪಯ್ಯೆ, ಹಿರಿಯರಾದ ಎನ್.ಎ ಪುತ್ತಬ್ಬ, ಅಬೂಬಕ್ಕರ್ ಪಯ್ಯೆ, ಶಾಫಿ, ದಿಡುಪೆ ಮಸ್ಜಿದ್ ಸದರ್ ಉಸ್ತಾದ್ ಮುಹಮ್ಮದ್ ಶರೀಫ್ ಸಖಾಫಿ, ಕೆ.ಎಮ್ ಅಬೂಬಕ್ಕರ್, ಕಾಜೂರು ಜಮಾಅತ್ ನ ಪ್ರಮುಖರು, ದಿಡುಪೆ ಜಮಾಅತ್ ನ ಹಿರಿಯರು, ಯಂಗ್‌ಮೆನ್ಸ್ ಕಾರ್ಯಕರ್ತರು ಭಾಗಿಯಾಗಿದ್ದರು.