ಬೆಳ್ತಂಗಡಿ; ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಹಿಂಪಡೆದುಕೊಳ್ಳುತ್ತಿರುವಂತೆ ವಿವಿಧ ಕಂಪೆನಿಗಳಲ್ಲಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸೋಮವಾರ "ಶ್ರಮಿಕ ಸಂಪರ್ಕ" ಸೇವೆಯ ಮುಖಾಂತರ ಸರಕಾರಿ ಬಸ್ಸಿನಲ್ಲಿ ಉಚಿತವಾಗಿ ಬೆಂಗಳೂರಿಗೆ ಪ್ರಯಾಣಿಸಿದರು.
ಬೆಳ್ತಂಗಡಿ ಬಸ್ಸು ತಂಗುದಾಣದಿಂದ ಈ ಯಾತ್ರಾರ್ಥಿಗಳನ್ನು ರಾಜಧಾನಿಗೆ ಕಳುಹಿಸಿಕೊಡಲಾಯಿತು.
ಶಾಸಕ ಹರೀಶ್ ಪೂಂಜ ಅವರೇ ಈ ಸಂದರ್ಭ ಉಪಸ್ಥಿತರಿದ್ದು ಎಲ್ಲ ಪ್ರಯಾಣಿಕರಿಗೂ ಶುಭಕೋರಿದರು.