ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಷರೋತ್ಸವ - 2022 ಸಾಹಿತ್ಯ ಮೇಳ
ಬೆಳ್ತಂಗಡಿ; ಸಾಹಿತ್ಯದ ಆರಂಭ ಶಾಸನಗಳ ಮೂಲಕ ಆಯ್ತು. ಬಳಿಕದ ಕಾಲಮಾನದಲ್ಲಿ ತಾಳೆಗರಿಗಳ ಮೂಲಕ ಮುಂದುವರಿಯಿತು. ಆ ಬಳಿಕ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ ನವ ಮಾಧ್ಯಮಗಳ ಮೂಲಕ ನವ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದು ಸಾಹಿತ್ಯ ಕ್ಷೇತ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಒದಗಿಸಿದ ಧನಾತ್ಮಕ ಅವಕಾಶ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಪಟ್ಟರು.
ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇಲ್ಲಿ ಅ.30 ರಂದು "ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಸಾಹಿತ್ಯದ ಸಾಧ್ಯತೆ, ಸವಾಲುಗಳು" ಪರಿಕಲ್ಪನೆಯಲ್ಲಿ ನಡೆದ ಅಕ್ಷರೋತ್ಸವ ರಾಜ್ಯಮಟ್ಟದ ಸಾಹಿತ್ಯ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲೆ ಸಾಹಿತ್ಯ ನಮ್ಮನ್ನು ಜೀವಂತವಾಗಿರಿಸುತ್ತದೆ. ಉತ್ತಮ ಸಾಹಿತ್ಯ ಒಂದು ಕಲಾಪ್ರಕಾರವೇ ಸರಿ. ಕಲೆಗೆ ಅಪಾರ ಶಕ್ತಿ ಇದೆ. ಆ ದರೆ ಆ ಕಲೆ ಮೇಳೈಸುವುದು ಸಾಹಿತ್ಯದಿಂದಲೇ ಆಗಿದೆ. ನಮ್ಮ ಕೈಯ್ಯಲ್ಲುರುವ ಸಮಯವನ್ನು ಸಾಹಿತ್ಯದ ಓದಿನ ಮೂಲಕ ಬಂಡವಾಳವಾಗಿ ತೊಡಗಿಸಿಕೊಂಡರೆ ಅದು ನಮಗೆ ಶ್ರೀಮಂತಿಕೆಯ ಫಲಿತಾಂಶ ತಂದುಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಡಂತ್ಯಾರು ಸೇ.ಹಾ.ಪದವಿ ಕಲೆ ಪ್ರಾಂಶುಪಾಲ ಡಾ| ಜೋಸೆಫ್ ಎನ್.ಎಂ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಪುಂಜಾಲಕಟ್ಟೆ, ಸ.ಪ.ಕಾಲೇಜಿನ ಪ್ರಾಂಶುಪಾಲ ಡಾ| ಟಿ.ಕೆ.ಶರತ್ ಕುಮಾರ್ ಕನ್ನಡ ಧ್ವಜಾರೋಹಣ, ಬೆಳ್ತಂಗಡಿ ಗುರುದೇವ ಪ.ಕಾಲೇಜಿನ ಪ್ರಾಂಶುಪಾಲೆ ಡಾ| ಸವಿತಾ ಕಾಲೇಜಿನ ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಗುರು ಹಿರಿಯರ ಆಶೀರ್ವಾದ, ಉಪನ್ಯಾಸಕ ವೃತ್ತಿ ಅನುಭವದೊಂದಿಗೆ ಕೋವಿಡ್ ಕಾಲಘಟ್ಟದಲ್ಲಿ ಪ್ರಾರಂಭಿಸಲಾದ ನಮ್ಮ ಸಂಸ್ಥೆ ಇಂದು ಕನಿಷ್ಠ ಮೂರು ವರ್ಷದಲ್ಲೇ ವಿಜ್ಞಾನ ವಿಭಾಗದಲ್ಲಿ 1ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡು ಅತ್ಯಂತ ಮುಂಚೂಣಿಯಲ್ಲಿದ್ದು, ಫಲಿತಾಂಶದಲ್ಲಿ ದಾಖಲೆ ಬರೆದಿದೆ ಎಂದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಎನ್ ಉದಯಚಂದ್ರ 'ಅಕ್ಷರೋತ್ಸವ ಕವಿತೆಗಳು ಭಾಗ 1 ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.
ಎಸ್‌ಡಿಎಂ ಕಾಲೇಜಿನ
ವಿಶ್ರಾಂತ ಕುಲಸಚಿವ ಡಾ| ಬಿ.ಪಿ. ಸಂಪತ್ ಕುಮಾರ್, ಕಾವ್ಯಯಾನ ಕವನ ಸಂಕಲನ ಬಿಡುಗಡೆ ಮಾಡಿದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಕೇಶವ ಬಂಗೇರ ಮುಖ್ಯ ಅತಿಥಿಯಾಗಿ ಶುಭ ಕೋರಿದರು.
ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಲತಾ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಉದ್ಯಮಿ ಶಮಂತ್ ಕುಮಾರ್ ಜೈನ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಚಲನಚಿತ್ರ ನಟ ಪ್ರಕಾಶ್ ತೋಮಿನಾಡು ಅವರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆ ನಡೆಯಿತು. ಕಾಂತಾರ ಚಲನಚಿತ್ರದಲ್ಲಿ ಜೂನಿಯರ್ ಕಮಲಕ್ಕ ಪಾತ್ರನಿರ್ವಹಿಸಿದ ಕಾಲೇಜಿನ ವಿದ್ಯಾರ್ಥಿನಿ, ಬಾಲಪ್ರತಿಭೆ ಸೃಷ್ಟಿ ಅವರಿಗೆ, ಸಂಸ್ಥೆಯ ಉಪನ್ಯಾಸಕಿ, ಕವಯಿತ್ರಿ ಪ್ರಜ್ಞಾ ಶ್ರೀನಾಥ್ ಕುಲಾಲ್ ಅವರಿಗೆ ಗೌರವಾರ್ಪಣೆ ನಡೆಯಿತು.
ಕಾಲೇಜಿನ ಪ್ರಾಚಾರ್ಯ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ.ಸತ್ಯನಾರಾಯಣ ಭಟ್ ಧನ್ಯವಾದವಿತ್ತರು.
ಗೋಷ್ಠಿ:
'ನವ ಮಾಧ್ಯಮ-ಭಾಷೆ ಮತ್ತು ಸಾಹಿತ್ಯದ ಭವಿಷ್ಯ' ದ ಕುರಿತು ಸಾಹಿತಿ ಡಾ| ನರೇಂದ್ರ ರೈ ದೇರ್ಲ ಉಪನ್ಯಾಸ ನೀಡಿದರು. .