Posts

ಗೇರುಕಟ್ಟೆ: 'ಮನ್‌ಶರ್' ಪಿ.ಯು ಕಾಲೇಜಿಗೆ ಸರಕಾರದಿಂದ ಅನುಮತಿ

1 min read


ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ಕಳೆದ 12 ವರುಷಗಳಿಂದ ವಿವಿಧ ಸ್ಥರದ ವಿದ್ಯಾ ಸಮೂಹ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವ 'ಮನ್‌ಶರ್ ಅಕಾಡೆಮಿ' ಯಲ್ಲಿ 2022- 23ನೇ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು ನಡೆಸಲು ಸರಕಾರದಿಂದ ಅಧಿಕೃತ ಅನುಮತಿ ದೊರೆತಿದೆ ಎಂದು ಸಂಸ್ಥೆಯ ಚೇರ್ಮನ್ ಹಾಗೂ ಖ್ಯಾತ ಧಾರ್ಮಿಕ ಯುವ ವಿದ್ವಾಂಸ  ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಹೊಸ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ 14 ಕಾಲೇಜುಗಳ ಪೈಕಿ ಮೂರು ಕಾಲೇಜುಗಳಿಗೆ ಅನುಮತಿ ದೊರೆತಿದ್ದು ಅದರಲ್ಲಿ  ಬೆಳ್ತಂಗಡಿ ತಾಲೂಕಿನ ಏಕೈಕ ಪಿ.ಯು ಕಾಲೇಜು ಮನ್‌ಶರ್ ಒಂದಾಗಿದೆ.

ಪ್ರಥಮ ವರ್ಷದ ಪ್ರವೇಶಾತಿಗೆ  ಸ್ಪೆಷಲ್ ಆಫರ್ ಘೋಷಣೆ

ಕಳೆದ ಮೂರು ವರ್ಷಗಳಿಂದ ಸರಕಾರದ ಅನುಮತಿಗಾಗಿ ಪದರಯತ್ನಪಡಲಾಗಿತ್ತು.‌ನಿಯಮಾನಿಸಾರ ಎಲ್ಲಾ ದಾಖಲೆಗಳು ಊರ್ಜಿತಗೊಂಡು ಇದೀಗ ಅನುಮತಿ‌ ದೊರೆತ ಖುಷಿಯಲ್ಲಿ ಈ ಬಾರಿ ಸಂಸ್ಥೆಯಲ್ಲಿ‌ ಪ್ರಥಮ ಪಿಯುಸಿಗಾಗಿ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ  ಪ್ರವೇಶ ಶುಲ್ಕದಲ್ಲಿ ವಿಶೇಷ ಆಫರ್ ಇದೆ. ಅಲ್ಲದೆ ನೋಂದಾಯಿತ ಸಂಸ್ಥೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಬಸ್ಸು ಪಾಸು, ಸರಕಾರದ‌ ವಿವಿಧ ಪ್ರಾಧಿಕಾರಿಗಳಿಂದ ದೊರೆಯುವ ಸ್ಕಾಲರ್ಶಿಪ್ ಕೂಡ ಪಡೆಯಲು ಅವಕಾಶವಿದೆ ಎಂದೂ ಮನ್‌ಶರ್ ತಂಙಳ್ ತಿಳಿಸಿದ್ದಾರೆ. ‌

------

ವರದಿ; ಅಚ್ಚು ಮುಂಡಾಜೆ

9449640130(ನಿಮ್ಮ ಯಾವುದೇ ಕಾರ್ಯಕ್ರಮದ ವರದಿ, ಸಮಸ್ಯೆಗಳ ಬಗ್ಗೆ ಬರೆದು ನಮಗೆ  ಕಳಿಸಿಕೊಡಿ.‌ನಾವು ಪ್ರಕಟಿಸುತ್ತೇವೆ)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment