Posts

ಉಜಿರೆಯಲ್ಲಿ ನೂತನ 'ರಿದಂ ಆಡಿಯೋ ಲ್ಯಾಬ್ಸ್' ಉದ್ಘಾಟನೆ

1 min read

ಉಜಿರೆ: ಉಜಿರೆ ಮುಖ್ಯ ರಸ್ತೆಯ ಪಂಚಮಿ ರೆಸಿಡೆನ್ಸಿ ಮುಂಭಾಗದ ಕಾರ್ತಿಕ್ ಕಾಂಪೆಕ್ಸ್ ನಲ್ಲಿ, ನಮ್ಮ ಮುಂಡಾಜೆ ಹೆಲ್ಪ್‌ಲೈನ್ ಬಳಗದ ಎಡ್ಮಿನ್, ಯುವ ಗಾಯಕ ಅಶ್ವೀರ್ ಸೋಮಂತಡ್ಕ ಅವರು ಆರಂಭಿಸಿದ  ನೂತನ ರಿದಂ ಆಡಿಯೋ ಲೇಬ್ಸ್ ಇದಕ್ಕೆ ಬಹು|ನೌಶಾದ್ ಹಿಮಮಿ ಸಖಾಫಿ ಚಾರ್ಮಾಡಿ ಅವರು ರವಿವಾರ ದುಆ ನೆರವೇರಿಸಿ ಚಾಲನೆ ನೀಡಿದರು. 


ಉದ್ಘಾಟನೆಯನ್ನು ಅಶ್ವಿರ್ ಅವರ ತಂದೆ ಹಮೀದ್ ಜಮಾಲುದ್ದೀನ್, ದೊಡ್ಡಪ್ಪ, ಬದ್ರಿಯಾ ಜುಮ್ಮಾ ಮಸ್ಜಿದ್ ನಿಕಟಪೂರ್ವ ಅಧ್ಯಕ್ಷ ಉಸ್ಮಾನ್ ಹಾಜಿ ಜಮಾಲುದ್ದೀನ್, ಲೈವ್ ಮೀಡಿಯಾ ನ್ಯೂಸ್ ಚಾನೆಲ್‌ನ ಪ್ರಿನ್ಸಿಪಲ್ ಎಡಿಟರ್ ಏಂಡ್ ಚೇರ್ಮನ್ ಅಶ್ರಫ್ ಆಲಿಕುಂಞಿ ಮುಂಡಾಜೆ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. 


ಈ ಸಂದರ್ಭ ಕಟ್ಟಡದ ಮಾಲಿಕರಾದ ಜಿ.ಪಂ ಮಾಜಿ ಸದಸ್ಯೆ  ಸುನಂದಾ ಚಂದ್ರಮೋಹನ ರೈ, ಹೆಲ್ಪ್‌ಲೈನ್ ಮುಂಡಾಜೆ ಬಳಗದ ಪ್ರಧಾನ ಎಡ್ಮಿನ್, ಯುವ ಉದ್ಯಮಿ ಸಿದ್ದೀಕ್ ಸಾಗರ್, ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ನೆಕ್ಕರೆ, ಯು.ಎ ಇಸ್‌ಹಾಕ್, ಸಂತೋಷ್ ಉಜಿರೆ, ಕೇಶವ್ ನೆಲ್ಯಾಡಿ, ಗಣೇಶ್ ನೆಲ್ಯಾಡಿ, ವಿದೇಶಿ ಮಿತ್ರ ಅಶ್ಪಾಕ್ ಸೋಮಂತಡ್ಕ, ರಶೀದ್ ಕೂಳೂರು, ಸಿದ್ದೀಕ್ ರೋಝ, ಉಮರ್ ರೋಝಾ, ನೌಶಾದ್ ಹುಬ್ಬಳ್ಳಿ, ಶಾಹಿರ್, ಸಮ್ರಾನ್, ಶಾಝಿಲ್, ಮರ್ಝೂಕ್ ಸಂಸೆ ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು. 

ರಿದಂ ಆಡಿಯೋ ಲ್ಯಾಬ್ಸ್ ಇದರ ಮಾಲಕ ಸಾಬಿತ್ ಕಳಸ, ಪ್ರಮೋಟರ್ ಎಂಡ್ ಕಂಪೋಸಿಂಗ್ ಇಂಜಿನಿಯರ್ ಅಶ್ವೀರ್ ಸೋಮಂತಡ್ಕ, ಕೈಸ್ ಗೇಲರಿ ಯುಟ್ಯೂಬ್ ಮಾಲಕ ಶಬೀರ್ ಕಕ್ಕಿಂಜೆ ಅವರು ಆಹ್ವಾನಿತ  ಗಣ್ಯರನ್ನು ಬರಮಾಡಿಕೊಂಡು ಗೌರವಿಸಿದರು. 

ಹೈಲೈಟ್ಸ್

ನೂತನ ಸ್ಟುಡಿಯೋ ದಲ್ಲಿ ಆಡಿಯೋ ರೆಕಾರ್ಡಿಂಗ್, ಆಡಿಯೋ ಮಿಕ್ಸಿಂಗ್-ಮಾಸ್ಟರಿಂಗ್ , ವಾಯ್ಸ್ ಓವರ್, ವೀಡಿಯೋ ಗ್ರಾಫಿ ಏಂಡ್ ವೀಡಿಯೋ ಎಡಿಟಿಂಗ್, ಕಂಪೋಸಿಂಗ್, ಎನೌನ್ಸ್‌ಮೆಂಟ್ಸ್, 'ವಿಶಸ್' ಸಾಂಗ್ಸ್ ರೆಕಾರ್ಡಿಂಗ್, ಇತ್ಯಾಧಿ ಸೌಲಭ್ಯ ಜನತೆಗೆ ಪಡೆಯಬಹುದು ಎಂದು ಸಾಬಿತ್ ಮತ್ತು ಅಶ್ವೀರ್ ಸೋಮಂತಡ್ಕ ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment