Posts

ಹೃದಯ ತಪಾಸನೆ ಕಾಲದ ಆವಶ್ಯಕತೆಯಾಗಿ ಮಾರ್ಪಟ್ಟಿದೆ; ಬಿಷಪ್ ಅಭಿಮತ|| ಲಾಯಿಲದಲ್ಲಿ ಹೃದಯ ತಪಾಸಣೆ, ಸಾಧಕರಿಗೆ ಗೌರವಾರ್ಪಣೆ

1 min read



ಬೆಳ್ತಂಗಡಿ: ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರೂ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ. ಅದಕ್ಕೆ  ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ ಎಂದು ಬೆಳ್ತಂಗಡಿ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಯಿ ಹೇಳಿದರು. 

ಅವರು ನೂರುಲ್ ಹುದಾ ಎಜುಕೇಶನ್ ಏಂಡ್  ಚಾರಿಟೇಬಲ್ ಟ್ರಸ್ಟ್ ಲಾಯಿಲ, ನೂರುಲ್ ಹುದಾ ಜುಮ್ಮಾ ಮಸ್ಜಿದ್ ಲಾಯಿಲ, ಗ್ರಾಮ ಪಂಚಾಯತ್ ಲಾಯಿಲ, ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ಕೆ ಎಂ ಸಿ  ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ ಲಾಯಿಲದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ,  ಕೆಲವೊಂದು ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಅದರೆ ಸಮಾಜಮುಖಿಯಾದ  ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಉದ್ಧೇಶದಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವಂತದ್ದು ಅಭಿನಂದನೀಯ. ನಮ್ಮ ಸಂಪಾದನೆಯಲ್ಲಿ ಒಂದು ಪಾಲನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದರು.

ಸನ್ಮಾನ;

ಕಾರ್ಯಕ್ರಮದಲ್ಲಿ  ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ, ಜೀವರಕ್ಷಕ ಹಮೀದ್ ಅಂಬುಲೆನ್ಸ್ , ಇಸ್ಮಾಯಿಲ್ ಸಂಜಯನಗರ ಇವರನ್ನು ಸನ್ಮಾನಿಸಲಾಯಿತು. 

ಹರೇಕಳ ಹಾಜಬ್ಬ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡನ್ನು  ಸಾಂಕೇತಿಕವಾಗಿ ನೀಡಿದರು. ಕಾರ್ಯಕ್ರಮವನ್ನು ಗಣ್ಯರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಜಾಫರ್   ಸ್ಪಾದಿಕ್ ತಂಙಳ್ ಲಾಯಿಲ, ಡಾ. ಗೋಪಾಲಕೃಷ್ಣ.ಕೆ, ಉದ್ಯಮಿ ಪುಷ್ಪರಾಜ ಶೆಟ್ಟಿ, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷೆ ಶೀಲಾ ಶೆಟ್ಟಿ, ಲಾಯಿಲ ನೂರುಲ್ ಹುದಾ ಜುಮ್ಮಾ ಮಸೀದಿಯ ಖತೀಬ್  ಮುಹಮ್ಮದ್ ರಿಯಾಝ್  ಬಾಹಸನಿ, ಮಸೀದಿ ಅಧ್ಯಕ್ಷ  ಅಝೀಝ್, ಹೈದರ್ ಆಲಿ ಎಂ ಮಂಗಳೂರು, ಹಮೀದ್ ಮಿಲನ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರ್ ವಹಿಸಿದ್ದರು. ಮುಹಮ್ಮದ್ ರಫೀಕ್ ನಿರೂಪಿಸಿ ಝಮೀರ್ ಸ‌ಅದಿ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment