ಬೆಳ್ತಂಗಡಿ : ಅರಫಾ ಜಾಮಿಅಃ ಮಸ್ಜಿದ್, ಅತ್ತಾಜೆ ಉಜಿರೆ ಮುಹಿಯುದ್ದೀನ್ ಅರಬಿಕ್ ಮದರಸ ಅತ್ತಾಜೆ ಹಾಗೂ ಎಸ್ಸೆಸ್ಸೆಫ್ ಎಸ್‌ವೈಎಸ್ ಎಸ್‌ಬಿಎಸ್ ಅತ್ತಾಜೆ ಸಹಯೋಗದೊಂದಿಗೆ, ಮದರಸದ ರೂವಾರಿ ನೂರುಲ್ ಉಲಮಾ ಎಂ.ಎ ಉಸ್ತಾದ್ ಸ್ಮರಣಾರ್ಥ ನೂತನ ಗ್ರಂಥಾಲಯದ ಉದ್ಘಾಟನೆಯು ಶುಕ್ರವಾರ ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯ ಅಧ್ಯಕ್ಷ ಇಬ್ರಾಹಿಂ ಹಾಜಿಯವರ ಅಧ್ಯಕ್ಷತೆಯಲ್ಲಿ ಮದರಸ ಹಾಲ್‌ನಲ್ಲಿ ನಡೆಯಿತು.
ಜಾಮಿಅಃ ಮಸ್ಜಿದ್ ಅತ್ತಾಜೆಯ ಖತೀಬ್ ಹಮೀದ್ ಸಅದಿ ಕುಕ್ಕಾವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್‌ಜೆಎಂ ಉಜಿರೆ ರೇಂಜ್ ಕೋಶಾಧಿಕಾರಿ ಖಾಲಿದ್ ಮುಸ್ಲಿಯಾರ್, ಕಾರ್ಯದರ್ಶಿ ಅಶ್ರಫ್ ಹಿಮಮಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಅತ್ತಾಜೆ ಬ್ರಾಂಚ್ ಅಧ್ಯಕ್ಷ ಹಕೀಂ, ಕಾರ್ಯದರ್ಶಿ ಅಶ್ರಫ್ ಮೆಡಿಕಲ್, ಕೋಶಾಧಿಕಾರಿ ಜಬ್ಬಾರ್, ಎಸ್ಸೆಸ್ಸೆಫ್ ಅಧ್ಯಕ್ಷ ಮಜೀದ್, ಕಾರ್ಯದರ್ಶಿ ಅನ್ವರ್, ಕೋಶಾಧಿಕಾರಿ ಝುಬೈರ್, ಎಸ್‌ಬಿಎಸ್ ಅಧ್ಯಕ್ಷ ರಾಯಿಫ್, ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯ ಪ್ರ.ಕಾರ್ಯದರ್ಶಿ ಇಕ್ಬಾಲ್, ಕೋಶಾಧಿಕಾರಿ ಮನ್ಸೂರ್ ಅತ್ತಾಜೆ, ಉಪಾಧ್ಯಕ್ಷ ಆಸಿಫ್, ಜೊತೆ ಕಾರ್ಯದರ್ಶಿ ಇಕ್ಬಾಲ್, ಕೆಸಿಎಫ್ ನಾಯಕ ರವೂಫ್ ಅತ್ತಾಜೆ, ಎಸ್‌ವೈಎಸ್ , ಎಸ್ಸೆಸ್ಸೆಫ್, ಎಸ್‌ಬಿಎಸ್ ಕಾರ್ಯಕರ್ತರು ಹಾಗೂ ಜಮಾಅತರು ಉಪಸ್ಥಿತರಿದ್ದರು.
ಮುಹಿಯುದ್ದೀನ್ ಅರಬಿಕ್ ಮದರಸ ಮುಅಲ್ಲಿಮ್ ಯೂನುಸ್ ಅಮ್ಜದಿ ಸ್ವಾಗತಿಸಿ ವಂದಿಸಿದರು.
ಎಂ.ಮುಬೀನ್ ಉಜಿರೆ ಕಾರ್ಯಕ್ರಮವನ್ನು ನಿರೂಪಿಸಿದರು.