Posts

ಬೆಳ್ತಂಗಡಿ: ಮೂಡುಕೋಡಿ ಗ್ರಾಮದಲ್ಲಿ ಗುಡ್ಡ ಹತ್ತಿ ಬಂಡೆಯ ಮೇಲೆ ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿ ಮಕ್ಕಳು

1 min read


ಬೆಳ್ತಂಗಡಿ: ತಾಲೂಕಿನ ಮೂಡುಕೋಡಿ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಯೂ ಒಂದು.‌ ಇಲ್ಲಿನ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಊಹಿಸಲು ಅಸಾಧ್ಯವಾಗಿದೆ. ಮಕ್ಕಳ ಶಿಕ್ಷಣಕ್ಕೆ ಅಡ-ತಡೆಗಳಾಗಬಾರದೆಂದು ಸರಕಾರವು ಆನ್ಲೈನ್ ತರಗತಿಗಳನ್ನು ಆರಂಭಿಸಿದ್ದರೂ ಮಕ್ಕಳಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಹೊರಬರಲು ಅಸಾಧ್ಯವಾಗಿದೆ.

ಗ್ರಾಮೀಣ ಪ್ರದೇಶಗಳ ಊರುಗಳಲ್ಲಿ‌ ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಮಕ್ಕಳು ಎದ್ದು ಬಿದ್ದು, ಕಾಡು ಗಿಡ ಮರಗಳೆನ್ನದೆ ಕಲ್ಲು-ಮುಳ್ಳು ಬಂಡೆಗಳ ಮೇಲೆ ತರಗತಿಗಳಿಗೆ ಹಾಜರಾಗಿ ಪಾಠವನ್ನು ಕೇಳಬೇಕಾದ ಪರಿಸ್ಥಿತಿ.


ಸರಿಯಾಗಿ ಧ್ವನಿ ಕೇಳಿಸದೆ ದೂರವಾಣಿ ಮೂಲಕ ಮಾತನಾಡಲು ಆಗದ ಮೂಡುಕೋಡಿಯ  ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ತರಗತಿಗೆ ಹಾಜರಾಗಲು ಎಷ್ಟರ ಮಟ್ಟಿಗೆ ಸಾಧ್ಯವಾದೀತು? ಒಂದು ಲಿಂಕ್ ತೆರೆಯಲು ನೆಟ್ ವರ್ಕ್ ಸಮಸ್ಯೆಯಾದಾಗ ಅಥವಾ ಬೋಧನೆಯ ಮಧ್ಯೆ ಹಲವು ಬಾರಿ ಸಂಪರ್ಕ ಸಮಸ್ಯೆಯಾದಾಗ ಅನೇಕ ಶಬ್ದಗಳ ಗೊಂದಲದೊಂದಿಗೆ ಮಕ್ಕಳು ಪಾಠ ಕೇಳಿಸದೆ ಎಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠವನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಬಹುದು ಎಂಬುವುದು ಪೋಷಕರ ಅಳಲು. 

ಕೊರೋನಾ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ್ದರಿಂದ ಅನೇಕ ಜನರು ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರೂ ಮಕ್ಕಳ ಭವಿಷ್ಯಕ್ಕೋಸ್ಕರ ಮೊಬೈಲ್ ಫೋನ್ ಹಾಗೂ ಕರೆನ್ಸಿಗಾಗಿ ಹಣ ದುಂದುವೆಚ್ಚ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೆಟ್ ವರ್ಕಿಗಾಗಿ ಮಕ್ಕಳು ಗುಡ್ಡ, ಮರ ಹತ್ತಿ ಪಾಠ ಕೇಳಬೇಕಾದ ಅನಿವಾರ್ಯ  ಬಂದೊದಗಿದೆ. ಈ ಸಂದರ್ಭದಲ್ಲಿ ಮಕ್ಕಳು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡರೆ ಅಥವಾ ಜೀವಕ್ಕೆ ಏನಾದರು ಅನಾಹುತ ಆದರೆ ಯಾರು ಹೊಣೆ ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳು, ಬೆಳ್ತಂಗಡಿ ಶಾಸಕರು, ಶಿಕ್ಷಣ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶವಾದ ಮೂಡುಕೋಡಿಯ ಮೊಬೈಲ್ ನೆಟ್ವರ್ಕ್ ಸಮಸ್ಯೆಗಳನ್ನು ಪರಿಹರಿಸಿಕೊಡುವಂತಾಗಲಿ ಎಂಬುದು ಜನರ ಬೇಡಿಕೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment