ಬೆಳ್ತಂಗಡಿ; 'ಅಭಯಾ ಮಹಿಳಾ ವೃಂದ ಉಜಿರೆ' ತಂಡದಿಂದ, ತುಳುನಾಡ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳು ಅಡಕವಾಗಿರುವ, ಯುವಜನತೆಯಲ್ಲಿ ಭತ್ತ ಬೇಸಾಯದ ಬಗ್ಗೆ ಜನಜಾಗೃತಿ ಉಂಟುಮಾಡುವ "ಕೆಸರ್ಡ್ ಒಂಜಿ ದಿನ- ನೇಜಿ ನೆಡ್ಪುನ ಕಜ್ಜ" ಎಂಬ ವಿಶೇಷ ಕಾರ್ಯಕ್ರಮ ಸುರ್ಯದ ಮೂಡಬೆಟ್ಟು ಗುತ್ತು ಗದ್ದೆಯಲ್ಲಿ ನೆರವೇರಿತು.
ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು ಎಲ್ಲಾ ವ್ಯವಸ್ಥೆಗಳನ್ನು ರೂಪಿಸುವಲ್ಲೊ ಮೋಹನ್ ಕೆ ಜೈನ್, ನೋಟರಿ ನ್ಯಾಯವಾದಿ ಶಶಿಕಿರಣ್ ಜೈನ್, ರಾಜಶೇಖರ್ ಅಜ್ರಿ ಹಾಗೂ ಅರುಣ್ ಕುಮಾರ್ ಇವರು ಉಪಸ್ಥಿತರಿದ್ದು ಮಾರ್ಗದರ್ಶನದ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಯಾ ತಂಡದ ಸಂಸ್ಥಾಪಕ ಸಂಚಾಲಕಿ ಶುಭಾ ರೈ ವಹಿಸಿದ್ದರು.ಮುಖ್ಯ ಆಥಿತಿಗಳಾಗಿ ಶಾಂತಾ ಬಂಗೇರ , ಯಶೋದಾ ಲಾಯಿಲ ಉಪಸ್ಥಿತರಿದ್ದರು.
ಅಭಯಾ ತಂಡದ ಹೆಮ್ಮೆಯ ಸದಸ್ಯರು ಪಾಲ್ಗೊಂಡಿದ್ದರು.
ಯಶೋದಾ ಹಾಗೂ ಎಲ್ಲಾ ಅಥಿತಿಗಳು ದೀಪ ಬೆಳಗಿಸಿ ಕಾರ್ಯಮಕ್ಕೆ ಚಾಲನೆ ನೀಡಿದರು. ಈ ಎಲ್ಲಾ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬುತ್ತಿರುವ ಕಮಲಾಕ್ಷ ಉಪಸ್ಥಿತರಿದ್ದರು.
ನೇಜಿ ನೆಡುವ ಕಾರ್ಯಕ್ರಮದ ನಂತರ ಅಭಯಾ ತಂಡದ ಸದಸ್ಯರಿಗೆ ಮನೋರಂಜನಾತ್ಮಕ ಆಟೋಟ ಸ್ಪರ್ಧೆಗಳನ್ನು ನೆಡೆಸಲಾಯಿತು.