Posts

ಯಕ್ಷಾಭಿಮಾನಿಗಳು ಕನ್ಯಾಡಿ ಸಂಕಲ್ಪದಂತೆ ಅನಾರೋಗ್ಯ ಪೀಡಿತ ಬಾಲೆಯ ಮನೆಯವರಿಗೆ ಧನಸಹಾಯ‌ ಹಸ್ತಾಂತರ

0 min read


ಬೆಳ್ತಂಗಡಿ; ತಾಲೂಕಿನ ಧರ್ಮಸ್ಥಳ ಗ್ರಾಮ ಜೋಡುಸ್ಥಾನ ಅಗುಳೆ ಮನೆ ದಿನೇಶ್ ಮತ್ತು ಭಾರತಿ ದಂಪತಿಯ  ಪುತ್ರಿ,‌‌ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕವಾಗಿ ಅಗಲಿದ ಬಾಲೆ ಧೃತಿ (7ವರ್ಷ) ಅವರ ಮನೆಯವರಿಗೆ, ಯಕ್ಷಾಭಿಮಾನಿಗಳು ಕನ್ಯಾಡಿ ವತಿಯಿಂದ ಆರ್ಥಿಕ ಸಹಾಯಹಸ್ತ ಚಾಚಲಾಯಿತು.

ಬಿಳಿ ರಕ್ತ ಕಣಗಳ ಕೊರತೆಯ ರೋಗದಿಂದ ಬಳಲುತ್ತಿದ್ದು ಇತ್ತೀಚೆಗೆ ದೃತಿ ಕೊನೆಯುಸಿರೆಳೆದಿದ್ದರು. ಆದರೆ ಯಕ್ಷಾಭಿಮಾನಿಗಳು ಬಳಗ ಸಂಕಲ್ಪಿಸಿದಂತೆ ಸಂಗ್ರಹವಾದ ಮೊತ್ತವನ್ನು ಬಾಲೆಯ ಮನೆಗೇ ತೆರಳಿ, ಸಂತಾಪವನ್ನೂ ವ್ಯಕ್ತಪಡಿಸಿ‌ 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಿತು.

ನಿಯೋಗದಲ್ಲಿ ಸಂಘಟಕ ದಾಮೋದರ, ಕಲಾವಿದ ಚಂದ್ರಶೇಖರ ಧರ್ಮಸ್ಥಳ, ಗಣೇಶ್ ಹೆಗ್ಡೆ ಕಡಬ, ಸದಾನಂದ ಯಸ್. ಕೆ., ಯಕ್ಷಹಾಸ್ಯ ಕಲಾವಿದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ಯಕ್ಷಬೊಲ್ಲಿ ಕಡಬ ದಿನೇಶ್ ರೈ‌ ಇವರುಗಳು ಉಪಸ್ಥಿತರಿದ್ದರು..

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment