Posts

ಮುಂಡಾಜೆ ಪಂಚಾಯತ್ ಅಧ್ಯಕ್ಷರ 10 ವರ್ಷದ ಮಗುವಿನ ಅಪಹರಣ! ರಿಕ್ಷಾ ಟಯರ್ ಹೂತುಹೋದ ವೇಳೆ ಇಳಿದು ಮನೆ ಸೇರಿದ ಪುಟಾಣಿ


ಬೆಳ್ತಂಗಡಿ; ಮುಂಡಾಜೆ ಗ್ರಾ.ಪಂ ಅಧ್ಯಕ್ಷರ ಪುತ್ರಿ 10 ವರ್ಷ ಪ್ರಾಯದ ಹೆಣ್ಣು ಮಗಳನ್ನು ದಾರಿ‌ತೋರಿಸುವ ನೆಪದಲ್ಲಿ ಅಪರಿಚಿತರುಯಾರೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಘಟನೆ ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ನಡೆದಿದೆ.

ಆದರೆ ಸ್ವಲ್ಪ‌ದೂರಕ್ಕೆ ಒಳ ರಸ್ತೆಯಲ್ಲಿ ರಿಕ್ಷಾ ಹೋಗುತ್ತಿದ್ದಾಗ ಅದರ ಟಯರ್ ರಸ್ತೆಯ ಕೆಸರಿನಲ್ಲಿ‌ ಹೂತುಹೋದ ಸಂದರ್ಭ ವಾಹನದಿಂದ ಇಳಿದ ಬಾಲೆ ಮತ್ತೆ ಮನೆ ಸೇರಿದ್ದಾಳೆಂದು ತಿಳಿದು ಬಂದಿದೆ.

5 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಕೂಳೂರು ಜನತಾ ಕಾಲನಿಯ ಸಂಬಂಧಿಕರ ಮನೆಯಲ್ಲಿದ್ದ ವೇಳೆ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಮನೆಯಂಗಳಕ್ಕೆ ಬಂದು ಸ್ಥಳೀಯ ಪ್ರದೇಶದ ದಾರಿ ತೋರಿಸಲು ಮಗುವಿನಲ್ಲಿ‌ ಕೇಳಿಕೊಂಡಿದ್ದ. ಸ್ವಲ್ಪ ಚುರುಕಿನ ಸ್ವಭಾವ ಇರುವ ಬಾಲಕಿ ತಕ್ಷಣಕ್ಕೆ ರಿಕ್ಷಾ ಹತ್ತಿಹೋಗಿದ್ದಳು. ಸ್ವಲ್ಪದರಲ್ಲೇ ಬಾಲಕಿ ಮನೆ ಸುತ್ತ ಕಾಣದಾದಾಗ ಎಲ್ಲರೂ ಆತಂಕಗೊಂಡರು.‌ ವಿಚಾರ ತಿಳಿಯುತ್ತಿದ್ದಂತೆ ಜನ ಜಮಾಯಿಸಿದರು. ಈ ವೇಳೆ ಅಕ್ಕ ಪಕ್ಕದ ಮನೆಯವರೆಲ್ಲರೂ ಅಲ್ಲೇ ಒಳ ರಸ್ತೆಯಲ್ಲಿ ಓಡಿಕೊಂಡು ಬರುವ ವೇಳೆ ರಿಕ್ಷಾವೊಂದು ಸಮರ್ಪಕವಾಗಿಲ್ಲದ ರಸ್ತೆಯಲ್ಲಿ ಅದರ ಟಯರ್ ಕೆಸರಿನಲ್ಲಿ ಹೂತು ಹೋದ ರೀತಿಯಲ್ಲಿ ದೂರದಿಂದ ಕಂಡುಬಂತು. ರಿಕ್ಷಾದಲ್ಲಿದ್ದವರು ಕೆಳಗೆ ಇಳಿದಿದ್ದ ವೇಳೆ ಮಗು ಕೂಡ ಇಳಿದಿತ್ತು.‌ ಜನ ಹತ್ತಿರ ಬರುತ್ತಿದ್ದಂತೆ ರಿಕ್ಷಾ ಅಲ್ಲಿಂದ ತೆರಳಿದೆ. ಮಗು ಮಾತ್ರ ಮತ್ತೆ ಮನೆ ಸೇರಿದೆ. ಆದರೆ ಜನಕ್ಕೆ ರಿಕ್ಷಾವನ್ನು ಗುರುತಿಸುವುದು ಅಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಬಳಿಕ ಬಾಲಕಿಯನ್ನು ಊರವರು ಮನೆಗೆ ವಾಪಾಸು ಕರೆ ತಂದಿದ್ದಾರೆ.

ನಂತರ ಬಾಲಕಿಯನ್ನು ಮನೆಯವರು ವಿಚಾರಿಸಿದಾಗ, ಅಲ್ಲಿ ಬಂದಿದ್ದವರು ಆಚಾರಿಕೊಟ್ಟಿಗೆಯವರ‌ ದಾರಿ ತೋರಿಸಲು ಕೇಳಿಕೊಂಡಿದ್ದರು.‌ ರಿಕ್ಷಾದ ಬಳಿ‌ ಹೋದಾಗ ಅದರಲ್ಲಿ ಇನ್ನೊಂದು ಮಗು ಇತ್ತು.‌ಆದ್ದರಿಂದ  ನಾನೂ ರಿಕ್ಷಾ ಹತ್ತಿದೆ. ಹಿಂದೆ ಇಬ್ಬರು ವ್ಯಕ್ತಿಗಳೂ ಕೂಡ ಇದ್ದರು. ರಿಕ್ಷಾ ಹೋಗುತ್ತಿದ್ದಾಗ ನಾನು ಅವರ ಬಳಿ ಪಂಚಾಯತ್ ಅಧ್ಯಕ್ಷರ ಮಗಳು ಎಂದಿದ್ದೇನೆ. ನಾವು ಹೋಗುತ್ತಿರುವ  ರಸ್ತೆ ಇದಲ್ಲ ಎಂದು ಹೇಳಿದೆ. ಅಷ್ಟರಲ್ಲಿ ರಿಕ್ಷಾ ಟಯರ್ ಹೂತುಹೋಗಿ ನಿಂತಿತು.‌ ನಾನು ಇಳಿದೆ ಎಂದಿದ್ದಾಳೆ.

ಘಟನೆಯ ಬಳಿಕ ಊರವರು, ಅವರು ವಿಳಾಸ ಕೇಳಿದ್ದ ಮನೆಯವರನ್ನು ವಿಚಾರಿಸಿದಾಗ ಅಲ್ಲಿಗೆ ಯಾರೂ ಹೋಗಿಲ್ಲ ಎಂದು ತಿಳಿದಿದೆ. ಆದ್ದರಿಂದ ಊರಿನಲ್ಲಿ‌ ಆತಂಕ ಮೂಡಿದೆ. ಹಾಗಾದರೆ ರಿಕ್ಷಾದಲ್ಲಿ ಬಂದ ಆ ಅಪರಿಚಿತರು ಯಾರು?

ಬಾಲಕಿಯನ್ನು ಮನೆಬಾಗಿಲಿನಿಂದ ಕರೆದುಕೊಂಡು ಹೋದ ಉದ್ದೇಶವಾದರೂ ಏನು? ಬಾಲಕಿ ರಿಕ್ಷಾದಿಂದ ಇಳಿದ ವೇಳೆ ಊರವರು ಬರುವುದನ್ನು ನೋಡಿ ರಿಕ್ಷಾದವರು ನಿಲ್ಲಿಸದೆ ಮಗುವನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋದದ್ದು ಯಾಕೆ? ಎಂಬಿತ್ಯಾಧಿ ಪ್ರಶ್ನೆಗಳು ಇದೀಗ ಮೂಡಿದೆ. 

ಪೊಲೀಸ್ ಠಾಣೆಗೆ ಮಾಹಿತಿ ನೀಡಿಲ್ಲ;

ಉಜಿರೆಯಲ್ಲಿ‌ ಕಳೆದ ಬಾರಿ ನಡೆದಿದ್ದ ಬಾಲಕನ ಅಪಹರಣ ಪ್ರಕರಣದಂತೆ ಇಲ್ಲೂ ಮಗುವನ್ನು ಅಪಹರಣ ಮಾಡಲಾಗಿದೆ ಎಂಬುದಾಗಿ ಒಮ್ಮೆಗೆ ಆತಂಕ ಶುರುವಾಗಿದ್ದರೂ ಮಗು ಸುರಕ್ಷಿತವಾಗಿ ಮನೆ ಸೇರಿದ್ದರಿಂದ ಮನೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಬೀಟ್ ಪೊಲೀಸ್ ಗೂ ತಿಳಿಸಿಲ್ಲ. ಆದರೆ ಘಟನೆ 

ಘಟನೆ ಬಗ್ಗೆ ಊರಿನಲ್ಲಿ‌ ಎಲ್ಲರಲ್ಲೂ ಭಯ ನೆಲೆಸಿದೆ. ಪೊಲೀಸ್ ದೂರು ನೀಡುತ್ತಿದ್ದರೆ ಅಕ್ಕಪಕ್ಕದ ಮನೆ- ಅಂಗಡಿ, ಅಥವಾ ಸೋಮಂತಡ್ಕ ಪೇಟೆಯಲ್ಲಿರುವ ಅಂಗಡಿಗಳ ಸಿಸಿ ಟಿವಿ ಪುಟೇಜ್ ಪಡೆದು , ಸಂಜೆ 4 ಗಂಟೆಯಿಂದ 6 ಗಂಟೆಯ ಮಧ್ಯೆ ಯಾವೆಲ್ಲಾ ವಾಹನಗಳು ರಸ್ತೆಯಲ್ಲಿ ಓಡಾಡಿದೆ ಎಂದು ಮಾಹಿತಿ ಕಲೆ ಹಾಕುವ ಅವಕಾಶ ಇತ್ತು.‌ ಇನ್ನೂ ಇದೆ ಕೂಡ.‌ ಆದ್ದರಿಂದ ಧರ್ಮಸ್ಥಳ ಠಾಣಾ ಪೊಲೀಸರು ಘಟನೆ ಬಗ್ಗೆ ಸ್ವಯಂ‌ ಆಸಕ್ತಿ ವಹಿಸಿ, ಪ್ರಕರಣ ದಾಖಲಿಸಿಕೊಂಡು ನಿಜಾಂಶ ಬಯಲುಮಾಡಬೇಕು ಎಂದು ಊರವರು ಅಭಿಪ್ರಾಯಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official