ಮಂಗಳೂರು.; ಶಿಕ್ಷಣ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಶಿಕ್ಷಕರು ಕೇವಲ ಶಿಕ್ಷಕರಾಗದೆ ಆದರ್ಶ ಶಿಕ್ಷಕರಾಗಿ, ಮಗುವಿನ ಮನಸ್ಸಿನಿಂದ ಮರೆಯಲಾಗದ ಶಿಕ್ಷಕರಾಗಲು ಶ್ರಮಿಸಬೇಕು ಎಂದು ಅಲ್ ತವಾಮ್ ಗ್ರೂಪ್ ನ ನಿರ್ದೇಶಕ, ಶಿಕ್ಷಣ ತಜ್ಞ ಡಾ. ಶೇಖ್ ಬಾವಾ ಹಾಜಿ ಮಂಗಳೂರು ನುಡಿದರು. ಅವರು ಮಂಗಳೂರು ನಗರದ ಕಂಕನಾಡಿಯ ಅಲ್‌ಝಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಿಟೋರಿಯಂ ನಲ್ಲಿ "ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ" NTTC ಕೋರ್ಸ್ ಪೂರ್ತಿ ಗೊಳಿಸಿದ ನರ್ಸರಿ ಶಿಕ್ಷಕಿಯರ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಿಝ್ ಲಂಡನ್ ಟೀಚರ್ಸ್ ಅಕಾಡೆಮಿಯ ಡೈರೆಕ್ಟರ್ ಉಮರುಲ್ ಫಾರೂಕ್ ರಝಾ ಅಮ್ಜದಿ ವಹಿಸಿದ್ದರು.
ವಿಶೇಷ ಅತಿಥಿಗಳಾಗಿ ಹಾಫಿಝ್ ಅನಸ್ ಅಹ್ಸನಿ, Alzayyan Educational Institutions ನಿರ್ದೇಶಕ ಇಲ್ಯಾಸ್ , Bliss London Teachers Academy ಯ ಟ್ರೈನರ್ ಗಳಾದ ಅಬ್ದುಸ್ಸಮದ್ ಅದನಿ, ಅಮ್ರಿನ್, ಸುಮಯ್ಯ ರಿಫಾ ಹಾಗೂ ರಫಾ ಮರ್ಯಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗಿದ್ದು, ಶಿಕ್ಷಣದ ಮಹತ್ವ, ಮಹಿಳಾ ಸಬಲೀಕರಣ ಹಾಗೂ ಉತ್ತಮ ಶಿಕ್ಷಕರ ಅಗತ್ಯತೆಯ ಕುರಿತು ಗಣ್ಯರು ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದ ಕುಮಾರಿ ನಝೀಫಾ ಸ್ವಾಗತಿಸಿದರು. ಮಿನಾಝ್ ಮತ್ತು ರೆಹನಾಝ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿನಿಯರ ಸಾಧನೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.


