Posts

ಎಳೆಯ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿ ವಿಘ್ನೇಶ್ ಭಂಡಾರಿ ಬಂಧನ; ಪೋಸ್ಕೋ ಪ್ರಕರಣ ದಾಖಲು

0 min read

ಬೆಳ್ತಂಗಡಿ; ಕಕ್ಕಿಂಜೆಯಲ್ಲಿ 4 ವರ್ಷ ಪ್ರಾಯದ ಎಳೆಯ ಬಾಲಕಿಯ ಮೇಲೆ ಸ್ಥಳೀಯ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಕಕ್ಕಿಂಜೆಯ ಕತ್ತರಿಗುಡ್ಡೆ ನಿವಾಸಿ ವಿಘ್ನೇಶ್ ಭಂಡಾರಿ(22ವ.) ಎಂಬಾತನೆಂದು‌ ಗುರುತಿಸಲಾಗಿದೆ. 

ಆರೋಪಿಯು ಇಲ್ಲಿಯೆ ಸಮೀಪದ ಅಪ್ರಾಪ್ತ ವಯಸ್ಸಿನ ಎಳೆಯ ಬಾಲಕಿಯನ್ನು ಮನೆಗೆ ಕರೆದು ಬೆತ್ತಲೆ ಚಿತ್ರಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಧರ್ಮಸ್ಥಳ ಪೋಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಆರೋಪಿ‌ ವಿರುದ್ಧ ಪೋಸ್ಕೋಪ್ರಕರಣ ದಾಖಲಿಸಿಕೊಂಡ ಪೋಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಯಾವುದೇ ಸರಿಯಾದ ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದ ಆರೋಪಿಯು ಈ ಹಿಂದೆಯೂ ಇಂತಹ ಕೃತ್ಯವೆಸಗಿದ್ದ ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ. ಧರ್ಮಸ್ಥಳ ಠಾಣೆಯಲ್ಲಿ‌ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment