Posts

ಆಪರೇಷನ್ ಅನುಭವ್- ಗ್ರಾಮಸ್ತರ ಕೈಗೆ ಸಿಕ್ಕಿಬಿದ್ದರೂ ಪ್ರಾಣ ರಕ್ಷಿಸಿಕೊಂಡ ಹೆಡ್‌ ಕಾನ್ಸ್‌ಟೇಬಲ್ ಇಬ್ರಾಹಿಂ..

1 min read

ಬೆಳ್ತಂಗಡಿ: ಉಜಿರೆಯ ಉದ್ಯಮಿ ಪುತ್ರ ಅನುಭವ್ ಅವರ ಪತ್ತೆ ಕಾರ್ಯಾಚರಣೆಯಲ್ಲಿ ತಂಡದಲ್ಲಿದ್ದ ಬೆಳ್ತಂಗಡಿ ಠಾಣಾ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಮಾರಕಾಯುಧದೊಂದಿಗೆ ಸೇರಿದ್ದ ಐನೂರು ಜನರ ಮಧ್ಯದಿಂದ ತಪ್ಪಿಸಿ ಒಂದೂವರೆ ಕಿ.ಮೀ ಓಡಿಕೊಂಡೇ ಬಂದು ಅಪಾಯದಿಂದ ತನ್ನನ್ನು ರಕ್ಷಿಸಿಕೊಂಡಿದ್ದಾರೆ.

ಎಸ್.ಐ ನಂದಕುಮಾರ್ ತಂಡದಲ್ಲಿ ಕೋಲಾರದ ಕೂರ್ನಹಳ್ಳಿಗೆ ತೆರಳಿದ್ದ ಹೆಡ್ ಕಾನ್ಸ್‌ಟೇಬಲ್ ಇಬ್ರಾಹಿಂ ಅವರೇ ಮಗುವಿನ ಕಾರ್ಯಾಚರಣೆಯಲ್ಲಿ ಮಹತ್ವದ ಕೊಡುಗೆ ನೀಡಿದವರು.

ಕೂರ್ನಹಳ್ಳಿಯಲ್ಲಿಯ ಮನೆಯಲ್ಲಿ ಮಗು ಅಪಹರಣಕಾರರು ನೆಲೆಸಿರುವುದು ಖಚಿತಗೊಂಡಿದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಎಸ್.ಐ ನಂದ ಕುಮಾರ್ ನೇತೃತ್ವದಲ್ಲಿ ತೆರಳಿದ್ದ ಐವರ ತಂಡದಲ್ಲಿ ಇಬ್ರಾಹಿಂ ಕೂಡ ಓರ್ವರಾಗಿದ್ದರು.


ಪೊಲೀಸರು ಸಮವಸ್ತ್ರ ಧರಿಸದೆ ಖಾಸಗಿ ವಾಹನ ಮಾಲಕ, ಕೃಷಿಕ ಅಜಯ್ ಶೆಟ್ಟಿ ಅವರ ಫಾರ್ಚುನರ್ ಕಾರಿನಲ್ಲಿ ಸ್ಥಳಕ್ಕೆ ತೆರಳಿದ್ದರು.

ಪೊಲೀಸ್ ತಂಡ ಅಪರಾತ್ರಿ ನಡೆಸಿದ ದಾಳಿಯ ವೇಳೆ ಅಪಹರಣಕಾರರು ಒಮ್ಮೆಗೇ ದಿಗ್ಬ್ರಾಂತರಾಗಿದ್ದರು. ತೀರಾ ಒಳನಾಡು ಪ್ರದೇಶವಾಗಿದ್ದು ನೀಲಗಿರಿ ಮರದ ತೋಪುಗಳ ಮಧ್ಯೆ ಇರುವ ಆ ಜಾಗದಲ್ಲಿ ಕ್ಷಣಾರ್ಧದಲ್ಲಿ ವಿಷಯ ಊರವರಿಗೆಲ್ಲ ತಿಳಿದು ಸುಮಾರು ಐನೂರರಷ್ಟು ಮಂದಿ ಅಲ್ಲಿ‌ ಜಮಾಯಿಸಿದ್ದರು.


ಮನೆಗೆ ದಾಳಿಗೈದವರು ಪೊಲೀಸರು ಎಂದು ತಿಳಿಯದ ಊರವರು ಇವರ ಖಾಸಗಿ ವಾಹನಕ್ಕೆ ಇತರ ವಾಹನ ಅಡ್ಡಇಟ್ಟು ಮಾರಕಾಯುಧಗಳನ್ನು ಹಿಡಿದು ಬೆದರಿಸಿದ್ದರು.

ಈ ವೇಳೆ ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ಮತ್ತು ಇನ್ನೋರ್ವ ಸಿಬ್ಬಂದಿ ಮಾತ್ರ ಪೊಲೀಸ್ ವಸ್ರ್ತ ಧರಿಸಿದ್ದರು.‌ಇಲ್ಲಿಂದ ಹೋಗಿದ್ದ ತಂಡದ ಎಲ್ಲರೂ ಸಿವಿಲ್ ಡ್ರೆಸ್‌ ನಲ್ಲಿದ್ದುದರಿಂದ ಇವರೂ ಪೊಲೀಸರೆಂದು ತೆಳಿಯದ ಅಲ್ಲಿನ ಜನರಿಂದ ಯಾವ ಸಂದರ್ಭದಲ್ಲೂ ಇವರ ವಿರುದ್ಧ ಪರಿಸ್ಥಿತಿ ಕೈ ಮೀರುವ ಲಕ್ಷಣಗಳಿತ್ತು. ಫಾರ್ಚುನರ್ ವಾಹನ ಕದಲದಂತೆ ತಡೆದಿದ್ದ ಊರವಿಗೆ ಕೊನೇ ಗಳಿಗೆಯಲ್ಲಿ ರಿವಾಲ್ವರ್ ತೋರಿಸಿ, ಕಳ್ಳರಿಂದ ಪೊಲೀಸರೇ ತಪ್ಪಿಸಿಕೊಂಡು ಓಡಿ ಬರುವ ಸ್ಥಿತಿ ಪೊಲೀಸರದ್ದಾಗಿತ್ತು. 

ಬಂಧಿತ ಆರೋಪಿಗಳನ್ನು ಮತ್ತು ರಕ್ಷಿತ ಮಗುವನ್ನು ವಾಹನದಲ್ಲಿ‌ ಕುಳ್ಳಿರಿಸಿಕೊಂಡಿದ್ದ ಪೊಲೀಸ್ ತಂಡ ಆಕ್ರಮಣಕಾರರ ಭಯದಿಂದ ಅಲ್ಲಿಂದ ತಪ್ಪಿಸಿ ಬರುವ ಭರದಲ್ಲಿ ತಂಡದ ಜೊತೆ ಹೋಗಿದ್ದ ಹೆಡ್ ಕಾನ್ಸ್‌ಟೇಬಲ್ ಚಾತುರ್ಯದಿಂದ ಇಬ್ರಾಹಿಂ ಅವರು ಅಲ್ಲೇ ಉಳಿದುಬಿಟ್ಟಿದ್ದರು. ಮಾರಕಾಯುಧಗಳನ್ನು ಹಿಡಿದುಕೊಂಡಿದ್ದ ಅವರ ಮಧ್ಯದಂದ ಇಬ್ರಾಹಿಂ ಅವರು ಸಿಲುಕಿಕೊಂಡಿದ್ದರು.

ಇತ್ತ‌ ಇಬ್ರಾಹಿಂ ಜೊತೆಗಿಲ್ಲದ್ದನ್ನು ಅರಿತ ತಂಡ ವಾಹನ ತಿರುಗಿಸಿ ಮರಳುವ ವೇಳೆ ತಂಡದ‌ ಮಧ್ಯೆ ಇದ್ದ  ಇಬ್ರಾಹಿಂ ಅವರು ಚಾಣಾಕ್ಷತನದಿಂದ ತಪ್ಪಿಸಿಕೊಂಡು ಒಂದು ಕಿ.ಮೀ ನಷ್ಟು ಓಡಿಕೊಂಡೇ ಬಂದು ತಮ್ಮನ್ನು ರಕ್ಷಿಸಿಕೊಂಡಿದ್ದರು. ಇಲ್ಲದಿದ್ದರೆ ಅವರ ಪ್ರಾಣಕ್ಕೂ ಸಂಚಕಾರ ಎದುರಾಗುತ್ತಿತ್ತು..‌

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

1 comment

  1. second ago
    Masha.allah