ಬೆಳ್ತಂಗಡಿ: ಗ್ರಾಮ ಮಟ್ಟದಲ್ಲಿ ಕೊರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಅರೋಗ್ಯ ಮಹಿಳಾ ಸಹಾಯಕಿಯರುಗಳ ಜನಸೇವೆಯನ್ನು ಗುರುತಿಸಿ ಅವರಿಗೆ ಮಾಸ್ಕ್, ಗ್ಲಾವ್ಸ್, ಸೇನಿಟೈಸರ್ ಹಾಗೂ ಗೌರವಧನವನ್ನು ಕಡಿರುದ್ಯಾವರ ಗ್ರಾ.ಪಂ ವತಿಯಿಂದ ನೀಡಲಾಯಿತು.
ಗ್ರಾ.ಪಂ ಸಭಾಂಗಣದಲ್ಲಿ ಶುಕ್ರವಾರ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಳ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಆಶಾ ಕಾರ್ಯಕರ್ತೆಯರಾದ ಭಾರತಿ ಕೊಂದೋಡಿ , ಯಶೋಧಾ , ವಿನಯ ಆರ್. ಗೌಡ , ಶಾರದಾ, ಆಶಾ ಕಾರ್ಯಕರ್ತೆ, ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಯು, ಸವಿತಾ ಎ.ಪಿ, ಜಯಶ್ರೀ ಇವರಿಗೆ ಪಂಚಾಯತ್ ವತಿಯಿಂದ ಗೌರವಧನ ವನ್ನು ವಿತರಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷೆ ಬೇಬಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಕೀರ್ತಿ ಹೆಚ್.ಬಿ ಹಾಗೂ ಪಂಚಾಯತ್ ಸದಸ್ಯರುಗಳಾದ ರಾಜೇಶ್, ಸೂರಜ್ ವಳಂಬ್ರ, ಗುರುಪ್ರಸಾದ್, ಸಾವಿತ್ರಿ, ರತ್ನಾವತಿ, ನಳಿನಿ, ಲಾವಣ್ಯಾ ಹಾಗೂ ಪಂಚಾಯತ್ ಸಿಬ್ಬಂದಿ ಗಳಾದ ಮಾಲತಿ, ತ್ರಿವೇಣಿ, ವಿತೇಶ್ ಕೋಟ್ಯಾನ್, ದೀಪಕ್.ಪಿ ಇವರುಗಳು ಉಪಸ್ಥಿತರಿದ್ದರು.