Posts

ಪುತ್ರಿ‌ "ದಿತಿ" ಸ್ಮರಣಾರ್ಥ ಅಶಕ್ತರಿಗೆ ಆರ್ಥಿಕ ನೆರವು ಪತ್ರಕರ್ತ ಮನೋಹರ್ ಬಳೆಂಜ - ಆರೋಗ್ಯ ಕಾರ್ಯಕರ್ತೆ ಲಿಖಿತಾ ದಂಪತಿ ಮಾದರಿ‌ ಸೇವೆ

1 min read


ಬೆಳ್ತಂಗಡಿ; ಪತ್ರಕರ್ತರಾದ ಮನೋಹರ್ ಬಳಂಜ ಮತ್ತು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಲಿಖಿತಾ ದಂಪತಿಯ ಪುತ್ರಿ "ದಿತಿ" ಸ್ಮರಣಾರ್ಥ ದಂಪತಿ ಪ್ರತೀವರ್ಷ ಪತ್ರಿಕಾ ದಿನಾಚರಣೆ ಯಂದು ಅಶಕ್ತ ಕುಟುಂಬಗಳಿಗಾಗಿ 30 ಸಾವಿರ ರೂ.ಗಳ ಆರ್ಥಿಕ ಸಹಾಯಹಸ್ತ ಚಾಚುವ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಏಳು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಅಕಾಲಿಕಾಗಿ ಇನ್ನಿಲ್ಲದಾದ ಪುತ್ರಿಯ ಹೆಸರಿನಲ್ಲಿ "ದಿತಿ ಸಾಂತ್ವಾನ ನಿಧಿ" ಎಂಬುದಾಗಿ ಯೋಜನೆ ರೂಪಿಸಿ‌ ಅವರು ನೆರವು ಚಾಚುತ್ತಾ ಬಂದಿದ್ದಾರೆ.


ಅಂದು ಪುತ್ರಿಯ ಚಿಕಿತ್ಸೆಗೆ ಸುಮಾರು 40 ಲಕ್ಷ ರೂ. ಗಳ ಅಂದಾಜು ಮೊತ್ತ ಬೇಕೆಂಬ ಸಂದಿಗ್ದತೆ ಎದುರಾದಾಗ ಹಲವಾರು ದಾನಿಗಳು‌ ಮನಮಿಡಿದು ಹೃದಯಪೂರ್ವಕ‌ ನೆರವು ನೀಡಿದ್ದರು. ಮೂರು ವರ್ಷಗಳ ಕಾಲ ನಿರಂತರ ಚಿಕಿತ್ಸೆ ನೀಡಿದರೂ ತಮ್ಮ ಬಾಲೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.ಆದರೆ ಸಮಾಜ ಅಂದು ತನಗೆ ನೀಡಿದ್ದ ನೆರವನ್ನು ಅವರು ಈ‌ ಮೂಲಕ‌ ಸಾಮಾಜಿಕ‌ ಋಣಸಂದಾಯ ಎಂಬುದಾಗಿ ಸ್ವಯಂ ಕಲ್ಪಿಸಿಕೊಂಡು‌, "ಕೆರೆಯ ನೀರ ಕೆರೆಗೆ ಚೆಲ್ಲಿ'' ಎಂಬಂತೆ  ಮತ್ತೆ ಅದನ್ನು ಸಮಾಜಕ್ಕೆ ನೀಡಲು ತೀರ್ಮಾನಿಸಿದ್ದರು. ದಂಪತಿಯ  ದುಡಿಮೆಯ ಸ್ವಲ್ಪ ಅಂಶವನ್ನು ಈ ಮೂಲಕ‌‌ ಸಮಾಜಕ್ಕೆ ನೀಡುತ್ತಿದ್ದರು.


ಈ ಬಾರಿಗೆ ನಾಲ್ವರಿಗೆ ಆರ್ಥಿಕ ಸಹಕಾರ; 

ಜು.3 ರಂದು ಬೆಳ್ತಂಗಡಿ ತಾ.ಪಂ ಸಭಾಂಗಣದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯ ವೇಳೆ ಅವರು ಈ ಬಾರಿ ಎರಡು‌ಸಂಘ ಸಂಸ್ಥೆ ಮತ್ತು‌ ಇಬ್ಬರು ಅರ್ಹರಿಗೆ ಆರ್ಥಿಕ ಸಹಾಯ ನೀಡಿದರು.

ಇಂದಬೆಟ್ಟು ಗ್ರಾಮದ ನಿವಾಸಿ ರಮೇಶ ಎಂಬವರು ಕೃಷಿ ಕ್ಷೇತ್ರ ಸೇವೆಯ ಸಮಯ ಅಡಿಕೆ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಐದು ವರ್ಷಗಳಿಂದ ಮಲಗಿದಲ್ಲೇ  ಇದ್ದು, ಅವರ ಪತ್ನಿ ಮತ್ತು ಓರ್ವ ಗಂಡು‌ ಮಗನಿದ್ದು ಈ ಕುಟುಂಬಕ್ಕೆ ನೆರವು ನೀಡಿದ್ದಾರೆ. ಬಳಂಜ ಗ್ರಾಮದ ನಾಲ್ಕೂರು ಬರಮೇಲು ನಿವಾಸಿ ಕೃಷ್ಣಪ್ಪ ಪೂಜಾರಿ ಹಾಗೂ ಉಮಾವತಿ ದಂಪತಿಯ ಪುತ್ರ,  ಮರದಿಂದ ಬಿದ್ದು ಎರಡು ಕೈಗಳಿಗೂ ಗಾಯವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅವರಿಗೆ ನೆರವು ನೀಡಿದರು. 

 ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 300 ಮಂದಿ ಸಮಾನ ಮನಸ್ಕರು ಸೇರಿಕೊಂಡು "ಬೆಳದಿಂಗಳು'' ಎಂಬ ತಂಡ ಕಟ್ಟಿಕೊಂಡು ನೊಂದವರಿಗೆ ಸಹಾಯ‌ನೀಡುತ್ತಿದ್ದು, ಇದುವರೆಗೆ 300 ಕ್ಕೂ ಅಧಿಕ ಕುಟುಂಬಕ್ಕೆ ನೆರವು ನೀಡಿದ ಆ ಸಂಸ್ಥೆಗೆ ಮತ್ತು ಗುರು ಬೆಳದಿಂಗಳು (ರಿ) ಕುದ್ರೋಳಿ ಈ ಸಮಾಜ ಸೇವಾ ಸಂಸ್ಥೆಗೆ  ಈ‌ಬಾರಿ ತಮ್ಮ ದೇಣಿಗೆ ಮೊತ್ತವನ್ನು ಸಮರ್ಪಿಸಿ‌ ಸಾರ್ಥಕತೆ ಪಡೆದರು.

ಈ ನಿಧಿಯನ್ನು ಈ‌ಬಾರಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ತಿನ ಶಾಸಕರುಗಳಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಹಾಗೂ ಗಣ್ಯರು ಚೆಕ್ ಮೂಲಕ‌ ನೀಡಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment