Posts

ಅಳದಂಗಡಿಯಿಂದ ಲಾರಿ ಕಳವು; ಆರೋಪಿಗಳಿಬ್ಬರ ಬಂಧನ

1 min read

 


ಬೆಳ್ತಂಗಡಿ: ಮನೆಯ ಮುಂಭಾಗ ನಿಲ್ಲಿಸಿದ್ದ ಟಾಟಾ ಕಂಪನಿಯ ಹತ್ತು ಚಕ್ರದ ಲಾರಿಯನ್ನು ಕಳವುಗೈದ ಆರೋಪಿಗಳಿಬ್ಬರನ್ನು  ವೇಣೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಅಸ್ಲಂ ಮತ್ತು ಅಪ್ರೋಜ್ ಎಂದು‌ ಗುರುತಿಸಲಾಗಿದೆ.

ಕಳವಾದ ಲಾರಿಯನ್ನು ಆರು ತಿಂಗಳ ಹಿಂದೆ ₹ 3,50,000/- ಗೆ ಬೆಳಗಾವಿಯ ಹನೀಫ್ ಎಂಬವರಿಗೆ  ಪಿಲ್ಯದ ಹಾರಿಸ್ ಎಂಬವರು ಮಾರಾಟ ಮಾಡಿದ್ದು ಲಾರಿಯನ್ನು ಖರೀದಿಸಿದ ಹನೀಫ್ ಲಾರಿಯ ಸಾಲದ ಕಂತನ್ನು ಕಟ್ಟದೆ ಮತ್ತು ನೊಂದಣಿ ಪತ್ರ ಬದಲಾಯಿಸದೇ ಇದ್ದುದರಿಂದ ಬೆಳಗಾವಿಯಿಂದ ಲಾರಿಯನ್ನು ವಾಪಾಸು ತಂದು ಸುಮಾರು ಐದು ತಿಂಗಳಿನಿಂದ ಪಿಲ್ಯ ಗ್ರಾಮದ ತನ್ನ ಮನೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಯಾವಾಗಲೊಮ್ಮೆ ಲಾರಿಯನ್ನು ಸ್ಟಾಟ್ ಮಾಡಿ ಅಲ್ಲೇ ನಿಲ್ಲಿಸುತ್ತಿದ್ದರು. ಕಳೆದ ವಾರ ಡಿಸೆಂಬರ್ 3 ರಂದು ತನ್ನ ಮನೆಯ ಮುಂಭಾಗ ನಿಲ್ಲಿಸಿದ್ದ ಲಾರಿ ಕಳವಾಗಿತ್ತು. ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ತಿಳಿದು ನಾರಾವಿ, ಬಜಗೋಳಿ, ಕಾರ್ಕಳ, ಅಳದಂಗಡಿ, ಬೆಳ್ತಂಗಡಿ ಪರಿಸರದ ಸ್ಥಳಗಳಲ್ಲಿ ಹುಡುಕಿದರೂ ಲಾರಿ ಪತ್ತೆಯಾಗದ ಕಾರಣ ಮಹಮ್ಮದ್ ಹಾರಿಸ್ ವೇಣೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ  ಲಾರಿ ಕಳವುಗೈದ ಇಬ್ಬರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.


ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ., ವೇಣೂರು ಪಿಎಸ್ಐ  ಲೋಲಾಕ್ಷ , ಎಸ್ಐ ಗಿರಿಯಪ್ಪ, ವಿಜಯ, ಸಿಬ್ಬಂದಿಗಳಾದ ಹರೀಶ್, ಅಬ್ದುಲ್ ಲತೀಫ್, ಪ್ರಮೋದ, ಇಬ್ರಾಹಿಂ ಗರ್ಡಾಡಿ, ರಾಜೇಶ್, ಕೃಷ್ಣ ಪ್ರಶಾಂತ್ ಇವರುಗಳು ಈ  ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು. ಇದೀಗ ಆರೋಪಿಗಳಿಗೆ ನ್ಯಾಯಾಲಯವು ಶರತ್ತುಬದ್ಧ ಜಾಮೀನು ಜಾಮೀನು ನೀಡಿದ್ದು, ಆರೋಪಿಗಳ ಪರ ಜುಬೇದಾ ಸರಳಿಕಟ್ಟೆ ಮತ್ತು ಮುಸ್ತಫಾ ಕಡಬ ವಾದಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment