Posts

ರೇಷ್ಮೆರೋಡ್ ಪ್ರದೀಪ್ ಕೊಲೆ ಪ್ರಕರಣ: ಆರೋಪಿ ದಿನೇಶ್ ನ್ಯಾಯತರ್ಪು ಅಪರಾಧಿ ಎಂದು ಸಾಬೀತು ; ಅ.31 ರಂದು ಶಿಕ್ಷೆ ಪ್ರಕಟ

1 min read

ಬೆಳ್ತಂಗಡಿ; 2017 ರಲ್ಲಿ  ರೇಷ್ಮೆರೋಡ್ ಎಂಬಲ್ಲಿ ಪೂರ್ವ ಧ್ವೇಷದಿಂದ ಪ್ರದೀಪ್ ಎಂಬವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ  ಆರೋಪಿ ದಿನೇಶ್ ನ್ಯಾಯತರ್ಪು ಎಂಬಾತ ಅಪರಾಧಿ ಎಂದು ನ್ಯಾಯಾಲಯ ಅಭಿಪ್ರಾಯಕ್ಕೆ ಬಂದಿದ್ದು, ಅ.31 ರಂದು ಅಪರಾಧಿಗೆ ಶಿಕ್ಷೆ ಪ್ರಕಟವಾಗಲಿದೆ.

2017 ರ ನವಂಬರ್ 24 ರಂದು ಆರೋಪಿ ದಿನೇಶ ಎಂಬಾತನು ತನ್ನ ಟಿಪ್ಪರ್ ಲಾರಿಯಲ್ಲಿ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ರೇಷ್ಮೆ ರೋಡ್ ಬಳಿ ಮಧ್ಯಾಹ್ನ 1.30 ರ ಸಮಯದಲ್ಲಿ  ಪ್ರದೀಪ ಎಂಬಾತನನ್ನು ಕಂಡು ಪೂರ್ವದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪನನ್ನು ಕೈ ಸನ್ನೆ ಮಾಡಿ ಟಿಪ್ಪರ್ ಲಾರಿ ಬಳಿ ಕರೆದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಲಿವರ್ ನಿಂದ ಪ್ರದೀಪನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ. 

ಈ ಘಟನೆಗೆ ಸಂಬಂಧಿಸಿದಂತೆ ಅಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆಗೆ ಕೈಗೆತ್ತಿಕೊಂಡಿದ್ದ ಆ ಸಮಯದಲ್ಲಿ ಬೆಳ್ತಂಗಡಿ ಪೊಲೀಸ್‌ ಸರ್ಕಲ್  ಇನ್ಸ್‌ಪೆಕ್ಟರ್ ಆಗಿದ್ದ, ಪ್ರಸ್ತುತ ಕೊಡಗು ಜಿಲ್ಲೆಯ ಡಿ.ಸಿ ಆರ್ ಬಿ ಆಗಿರುವ ನಾಗೇಶ್ ಕದ್ರಿ  ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರಿ ಚಾರ್ಜ್‌ಶೀಡ್ ಅನ್ನು ಕೈಗೆತ್ತಿಕೊಂಡ ಮಂಗಳೂರು ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷ್ಯಾಧಾರಗಳ ಪ್ರಕಾರ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದೆ. ಶಿಕ್ಷೆಯವ ಪ್ರಮಾಣವನ್ನು ಅ.31 ರಂದು ಪ್ರಕಟಿಸಲಿದೆ.

ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಈಗಿನ ವೇಣೂರು ಎಎಸ್‌ಐ ಆಗಿರುವ ವೆಂಕಟೇ‌ಶ್ ನಾಯ್ಕ ಇವರು ಸಹಕರಿಸಿದ್ದು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಶೇಖರ್ ಶೆಟ್ಟಿ ಅವರು ವಾದ ಮಂಡಿಸಿರುತ್ತಾರೆ.

ನಾಗೇಶ್ ಕದ್ರಿ ಇವರು ಬೆಳ್ತಂಗಡಿ ವೃತ್ತದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ ತಾಲೂಕಿನಲ್ಲಿ ಆಗಿದ್ದ ಪ್ರಮುಖ 7 ಗಂಭೀರ ಪ್ರಕರಣಗಳಲ್ಲಿ 6 ಪ್ರಕರಣಗಳಲ್ಲಿ ಆರೋಪಿಗಳಿಗೆ ಇದೀಗ ಶಿಕ್ಷೆಯಾಗುತ್ತಿರುವುದು ಬಹಳ ಅಪರೂಪದ ದಾಖಲೆಯಾಗಿದೆ. ತನಿಖಾಧಿಕಾರಿಯಾಗಿ ಅವರು ಮತ್ತು ಅವರ ತಂಡದಲ್ಲಿದ್ದ ಸಿಬ್ಬಂದಿಗಳ ಪೈಕಿ ಎಎಸ್‌ಐ ವೆಂಕಟೇಶ್ ನಾಯ್ಕ್ ಸಹಿತ ಪ್ರಮುಖರು  ಘಟನೆಯ ಬಗ್ಗೆ ಸರಿಯಾದ ಸಾಕ್ಷಿ ಸಹಿತ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿದ್ದರಿಂದ ಪ್ರಕರಣಗಳು ಇದು ನ್ಯಾಯಾಲಯದಲ್ಲಿ ಸಾಬೀತಾಗುತ್ತಿದೆ ಎಂಬುದು ಉಲ್ಲೇಖನೀಯ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment