Posts

'ಅಮ್ಮನ ನೆರವಿಗೆ ಬನ್ನಿ' ಎಂದು 12 ರ ಹರೆಯದ ಮಗಳ ಮನಕಲಕುವ ಪತ್ರ!ಗೆಡ್ಡೆ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಯಾಚಿಸಿದ ಮನಮಿಡಿಯುವ ಘಟನೆ

1 min read

ಬೆಳ್ತಂಗಡಿ; ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್‌ಗೊಳಗಾಗಿರುವ ನನ್ನ ಅಮ್ಮನ ಚಿಕಿತ್ಸೆಗೆ ಲಕ್ಷಾಂತರ ರೂ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11 ರ ಹರೆಯದ ಬಾಲಕಿಯೊಬ್ಬಳು ಡಿಎಸ್‌ಎಸ್ ಸಂಘಟನೆಗೆ ಮನಕಲಕುವ ಪತ್ರ ಬರೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಕೊರಜಂಡ ಮನೆ ನಿವಾಸಿ‌ ದಿ. ವಾಸಪ್ಪ ಎಂಬವರ ಪುತ್ರಿ ವಿತೀತಾ ಎಂಬವರೇ ಈ ರೀತಿ ಪತ್ರ ಬರೆದು ಸಹಾಯ ಯಾಚಿಸಿರುವ ಬಾಲಕಿ.

ನಾನು ನನ್ನ ತಂದೆಯನ್ನು ಹಲವು ವರ್ಷಗಳ ಹಿಂದೆಯೇ ಮರ. ಮೈ ಮೈಲೆ ಬಿದ್ದು‌ ನಡೆದ ಘಟನೆಯಲ್ಲಿ ಕಳೆದುಕೊಂಡಿದ್ದೇನೆ. ನಾನು ಕಣಿಯೂರು ಶಾಲೆಯಲ್ಲಿ6 ನೇ ತರಗತಿಯಲ್ಲಿ ಓದುತ್ತಿದ್ದರೆ, ನನ್ನ‌ ಸಹೋದರ 2 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಅಮ್ಮ ಪದ್ಮುಂಜ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ದುಡಿದು ನಮ್ಮನ್ನು ಸಾಕುತ್ತಿದ್ದರು.
ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆಯೊಳಗೆ ನೋವು ಕಾಣಿಸಿಕೊಂಡಾಗ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಅದು ಗಡ್ಡೆ ಕ್ಯಾನ್ಸರ್ ಎಂದು ತಿಳಿಯಿತು. ಎಲ್ಲೆಲ್ಲಿಂದಲೂ ಹಣ ಒಟ್ಟುಗೂಡಿಸಿ 3-4. ಲಕ್ಷ ರೂ. ವ್ಯಯಿಸಿ ಚಿಕಿತ್ಸೆ ಮಾಡಲಾಯಿತು. ‌ಇದೀಗ ಮತ್ತೆ ರೋಗ ಉಲ್ಬಣಿಸಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಇದೀಗ ಮತ್ತೆ ಆಪರೇಷನ್ ಆಗಬೇಕೆಂದು ಹೇಳಿದ್ದು ಚಿಕಿತ್ಸೆ ಪಡೆಯಬೇಕಾಗಿದೆ. ಇದಕ್ಕೆ ಇನ್ನೂ 4-5 ಲಕ್ಷ ರೂ. ಬೇಕಿದೆ ಎಂದಿದ್ದಾರೆ‌. ಆದ್ದರಿಂದ ಡಿಎಸ್‌ಎಸ್ ಸಂಘಟನೆ ಮತ್ತು ಸಾರ್ವಜನಿಕರು ನೆರವಾಗಬೇಕು ಎಂದು ಭಿನ್ನವಿಸಿಕೊಂಡಿದ್ದಾಳೆ.

ಸಹಾಯ ಮಾಡಬಯಸುವವರು;

ವಿನೀತಾ

AC No. 1599101010052

IFSC CODE: 

CNRB 0001599

CANARA BANK PADMUNJA 

PHON; 7760422885

-----

ವರದಿ: ಅಚ್ಚು ಮುಂಡಾಜೆ

9449640130

(ನಿಮ್ಮ ಎಲ್ಲಾ ಬಗೆಯ ವರದಿಗಳನ್ನು ನಮಗೆ ನೀಡಿ)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment