Posts

ಮರ ಏರುವ ಗೇರ್ ವೈರ್ ಸಿಸ್ಟಮ್‌ನ ರೋಪ್ ತುಂಡಾಗಿ ಕೆಳಬಿದ್ದ ಕೃಷಿಕ ನಿತ್ಯಾನಂದ ರೈ ಅವರಿಗೆ ಗಾಯ

1 min read


ಬೆಳ್ತಂಗಡಿ : ಔಷಧಿ ಸಿಂಪಡಣೆಯ ವೇಳೆ ತೆಂಗಿನ ಮರ ಏರುವ ಗೇರ್ ವೈರ್ ನ ಸಿಸ್ಟಮ್ ಮುರಿದ ಪರಿಣಾಮ ಕಳೆಂಜ ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ (45ವ)

ಅವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆ ಸೇರಿದ ಘಟನೆ ರವಿವಾರ ನಡೆದಿದೆ.

ಇಂದು ಮಳೆ ಕಡಿಮೆ ಇದ್ದಿದ್ದರಿಂದ ಕಳೆಂಜ ಗ್ರಾಮದ ಗುತ್ತಿಮಾರು ನಿವಾಸಿ ನಿತ್ಯಾನಂದ ರೈ ತಮ್ಮ ತೋಟದಲ್ಲಿ ಅಡಿಕೆ ಮರಕ್ಕೆ ಔಷಧಿ ಬಿಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ತಕ್ಷಣ ಮನೆಯವರು ಹಾಗೂ ಸ್ಥಳೀಯರು ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಈ ವಿಚಾರದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ವೇಳೆ ಇದೊಂದು 'ಟ್ರೀ ಬೈಕಿ'ನಿಂದ ಆದ ಅವಘಡ ಎಂದು ಪ್ರಸಾರವಾಗಿತ್ತು.‌ ಇದಾದ ಮೆಲಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ಕೂಡ ಬಂತು. ಸರಿಯಾಗಿ ವಿಮರ್ಶಿಸದೆ ನ್ಯೂಸ್ ಗಳಲ್ಲಿ 'ಟ್ರೀ ಬೈಕ್"' ಎಂದು ತಪ್ಪಾಗಿ ಬಿಂಬಿಸಿರುವುದು ಖಂಡನೀಯ ಎಂದೂ ಆಕ್ರೋಶ ವ್ಯಕ್ತವಾಗಿದೆ. ಈ ಅವಘಡದಿಂದಾಗಿ ನಿತ್ಯಾನಂದ ರೈ ಅವರಕುತ್ತಿಗೆಗೆ ಏಟು ಬಿದ್ದಿದೆ. ಸದ್ಯ ಅವರು ಮಂಗಳೂರಿನಕೆ ಎಂ ಸಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment