ಬೆಳ್ತಂಗಡಿ; ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಬೆಳ್ತಂಗಡಿ ಇದರ ಆಡಳಿತಕ್ಕೊಳಪಟ್ಟ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು , ಬೆಳ್ತಂಗಡಿ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಅರ್ಹ ವಿದ್ಯಾರ್ಥಿಗಳಿಗೆ 2021-2022 ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿದ ದಾನಿಗಳಿಗೆ ಅಭಿನಂದನಾ ಸಮಾರಂಭ ಆಶಾಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಫೆ.28 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ ವಹಿಸಿದ್ದರು.ಸಮಾರಂಭದಲ್ಲಿ ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳಉಪಾಧ್ಯಕ್ಷ ಪದ್ಮನಾಭ ಮಾಣಿಂಜ,ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಅಳದಂಗಡಿ ಸುವರ್ಣ ಕ್ಲಿನಿಕ್ ನ ಡಾ.ಹರಿಪ್ರಸಾದ್ ಸುವರ್ಣ, ನಿವೃತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ವೀರಮ್ಮ ಮತ್ತು ಮಕ್ಕಳು ಡೊಂಕಬೆಟ್ಟು, ಕಿರಣ್ ಕುಮಾರ್ ಮಂಜಿಲ, ಸಂಪತ್ ಮತ್ತು ಸನತ್ ಅಂಚನ್ ಕುಕ್ಕೇಡಿ, ಫೆಡ್ರಿಕ್ ಪಿಂಟೋ, ತೋಮಸ್ ನೊರೋನ್ಹ ಅಂಡಿಂಜೆ, ಶೇಖ್ ರಶೀದ್ ಬೆಳ್ತಂಗಡಿ, ಸಂತೋಷ್ ಯುವವಾಹಿನಿ, ಗುರುರಾಜ್ ಗುರಿಪಳ್ಳ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ, ಮೊದಲಾದವರನ್ನು ಅವರು ನೀಡಿದ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ.ಪೂ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ ತಮ್ಮ ವಿಭಾಗದ ವರದಿ ಮಂಡಿಸಿದರು. ಉಪನ್ಯಾಸಕ ಶಮಿವುಲ್ಲಾ ಸ್ವಾಗತಿಸಿದರು.ನಿರೂಪಣೆಯನ್ನು ಹರೀಶ್ ಪೂಜಾರಿ ಮತ್ತು ಪವಿತ್ರಾ ನಡೆಸಿದರು. ಹೇಮಾವತಿ ಕೆ ಸನ್ಮಾನಿತರ ಪರಿಚಯ ಮಾಡಿದರು. ರಾಕೇಶ್ ಕುಮಾರ್ ಧನ್ಯವಾದರು.