Posts

ಧನ ಮತ್ತು ಆರೋಗ್ಯ ಇವುಗಳಲ್ಲಿ ಆರೋಗ್ಯವೇ ಮುಖ್ಯ; ಖ್ಯಾತ ಹೃದಯರೋಗ ತಜ್ಞ ಡಾ. ಯೂಸುಫ್ ಕುಂಬ್ಲೆ

1 min read


ಸುನ್ನತ್‌ಕೆರೆ ಮಸ್ಜಿದ್ ಸಭಾಂಗಣದಲ್ಲಿ ಇಂಡಿಯಾನ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯಮೇಳ

ಬೆಳ್ತಂಗಡಿ: ಧನಸಂಪಾದನೆ ಮತ್ತು ಆರೋಗ್ಯ ಇವುಗಳಲ್ಲಿ ಯಾವುದು ಮುಖ್ಯ ಎಂದು ನಾವು ವಿಮರ್ಷಿಸಹೋದರೆ ನಮ್ಮ ಸಹಜವಾದ ಆರೋಗ್ಯವೇ ಮುಖ್ಯನಪಾತ್ರವಹಿಸುತ್ತದೆ ಎಂದು ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಖ್ಯಾತ ಹೃದಯ ರೋಗ ತಜ್ಞ ಡಾ. ಯೂಸುಫ್ ಕುಂಬ್ಲೆ ಹೇಳಿದರು.

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕ, ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಸುನ್ನತ್‌ಕೆರೆ ಇವರ ವತಿಯಿಂದ ಇಂಡಿಯಾನ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಡಿ.5 ರಂದು ಸುನ್ನತ್‌ಕೆರೆ ಮಸ್ಜಿದ್ ಸಭಾಂಗಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯಮೇಳದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಇಲ್ಲಿನ‌ ನಿಮ್ಮ ಸಂಘಟನೆಯ ಪತ್ರ ಇದ್ದಲ್ಲಿ ನಮ್ಮಲ್ಲಿ ಅರ್ಹ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ನಾವು ಬದ್ಧ. ಉಳಿದವರಿಗೆ ಶೆ.25 ರಿಯಾಯಿತಿ ನೀಡಲಿದ್ದೇವೆ ಎಂದು ಯೂಸುಫ್ ಕುಂಬ್ಲೆ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್  ಮಾತನಾಡಿ, ಯೂಸುಫ್ ಕುಂಬ್ಲೆ ಯಂತಹಾ ಹೃದಯವಂತ ವೈದ್ಯರುಗಳ ಮಾನವೀಯ ಸೇವೆಯಿಂದ ಇಂದು ಇಂಡಿಯಾನ ಆಸ್ಪತ್ರೆ ಪ್ರಸಿದ್ದಿ ಪಡೆದಿದೆ. ಯೂಸುಫ್ ಕುಂಬ್ಲೆ ಅವರ ಸರಳತೆ ಅವರ ಸೇವೆಯನ್ನು ಎತ್ತರಿಸಿದೆ ಎಂದರು. 

ಬುಸ್ತಾನುಲ್ ಉಲೂಂ ಮದರಸದ ಮುಖ್ಯೋಪಾಧ್ಯಾಯ ಅಶ್ರಫ್ ಮುಸ್ಲಿಯಾರ್ ದುಆ ದೊಂದಿಗೆ ಶಿಬಿರ ಉದ್ಘಾಟನೆಗೊಂಡಿತು. 

ಸಮಾರಂಭದಲ್ಲಿ ಸುನ್ನತ್‌ಕೆರೆ ಜಮಾಅತ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ಲತೀಫ್, ಗ್ರಾ.ಪಂ ಸದಸ್ಯ ಶಮೀರ್, ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಧ್ಯಕ್ಷ ಖಲಂದರ್ ಬಿ.ಹೆಚ್, ಆಡಳಿತಾಧಿಕಾರಿ ಡಾ. ದೇವಾನಂದ ಉಪಸ್ಥಿತರಿದ್ದರು. ಸುನ್ನತ್‌ಕೆರೆ ಖತೀಬ್ ಕೆ.ಪಿ ಸಿರಾಜುದ್ದೀನ್ ಮದನಿ ದುಆ ನೆರವೇರಿಸಿದರು.

ಶಿಬಿರದಲ್ಲಿ ಭಾಗಿಯಾದ ಎಲ್ಲಾ 11 ಮಂದಿ ವೈದ್ಯರುಗಳು, ಸಿಬ್ಬಂದಿ, ಸಂಘಟನೆಯ ಪ್ರಮುಖರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜಮೀಯತುಲ್ ಫಲಾಹ್ ಕಾರ್ಯದರ್ಶಿ ಹೈದರ್ ನೀರ್ಸಾಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಯಂಗ್ ಮೆನ್ಸ್ ಕಾರ್ಯದರ್ಶಿ ಇಸಾಕ್ ವಂದಿಸಿದರು. ಶಿಬಿರದ ಸಂಯೋಜಕರಾದ ಅಬ್ಬೋನು ಮದ್ದಡ್ಕ ಸಹಿತ ಜಂಟಿ ಸಂಘಟನೆಗಳ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಶಿಬಿರದ ಯಶಸ್ವಿಗೆ ಸಹಕರಿಸಿದರು. ಒಟ್ಟು 450 ಮಂದಿ ಪ್ರಯೋಜನ ಪಡೆದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment