ಬೆಳ್ತಂಗಡಿ; ಸರಕಾರದಿಂದ ಮಂಜೂರಾದ 2.10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ವಕೀಲರ ಭವನದ ಉದ್ಘಾಟನೆಯು ಡಿ.28 ರಂದು ಸಂಜೆ 5. 00 ಗಂಟೆಗೆ ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್ ಅವರು ಹೇಳಿದರು.
ಉದ್ಘಾಟನೆಯನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಗಳಾದ ಅಬ್ದುಲ್ ನಝೀರ್ ನಡೆಸಲಿದ್ದಾರೆ.
ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ವಹಿಸಲಿದ್ದಾರೆ.
ಸಮಾರಂಭದಲ್ಲಿ ಕಾನೂನು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ, ಉಸ್ತುವಾರಿ ಸಚಿವ ಅಂಗಾರ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಮುಹಮ್ಮದ್ ನವಾಝ್ ಮತ್ತು ವಿಶ್ವಜಿತ್ ಶೆಟ್ಟಿ, ಸರ್ವೋಚ್ಚ ನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಭಾಗವಹಿಸಲಿದ್ದಾರೆ.
ನೂತನ ವಕೀಲರ ಭವನದ ನೆಲಮಹಡಿಯಲ್ಲಿ ಟೈಪಿಂಗ್ ಸೆಕ್ಷನ್ ಮತ್ತು ವಕೀಲರಿಗೆ ಮತ್ತು ಸಾರ್ವಜನಿಕರಿಗಾಗಿ ಕ್ಯಾಂಟೀನ್ ಇರುತ್ತದೆ. ಮೊದಲನೇ ಮಹಡಿಯಲ್ಲಿ ಮುಖ್ಯವಾಗಿ ಪುರುಷ ವಕೀಲರ ಕೊಠಡಿ , ಲೈಬ್ರೆರಿ ಮತ್ತು ಅಧ್ಯಕ್ಷರ ಕೊಠಡಿ ಇರುತ್ತದೆ . ಎರಡನೇ ಮಹಡಿಯಲ್ಲಿ ಮುಖ್ಯವಾಗಿ ಕಾನ್ಫರೆನ್ಸ್ ಹಾಲ್ , ಮಹಿಳಾ ವಕೀಲರ ಕೊಠಡಿ ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಕೊಠಡಿಗಳು ಇರುತ್ತದೆ . ಸದ್ಯದಲ್ಲೇ ಕಟ್ಟಡದ ಲಿಫ್ಟ್‌ನ ವ್ಯವಸ್ಥೆಗಾಗಿ ಸುಮಾರು 20 ಲಕ್ಷದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿಗಾಗಿ ಸರಕಾರದ ಹಂತದಲ್ಲಿರುತ್ತದೆ . ಉದ್ಘಾಟನಾ ಕಾರ್ಯಕ್ರಮದ ಯಶಸ್ಸಿಗಾಗಿ ಹಿರಿಯ - ಕಿರಿಯ ವಕೀಲರುಗಳನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಾರ್ವಜನಿಕರೂ ಕೂಡ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ವಿಶೇಶ ಆಹ್ವಾನಿತರಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್, ಹಾಗು ಹರೀಶ
ಕುಮಾರ್, ಎಸ್.ಎಲ್ ಭೋಜೇ ಗೌಡ, ರಾಜ್ಯ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ ಬಾಬು, ಪಿ.ಪಿ ಹೆಗ್ಡೆ ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್ ಠೋಸರ್, ವಿವಿಧ ಪದಾಧಿಕಾರಿಗಳಾದ ಶಶಿಕರಣ್ ಜೈನ್, ಅಜಿತ್ ಕುಮಾರ್, ಶಿವಯ್ಯ ಎಸ್.ಎಲ್, ಪಿ.ಆರ್ ನಾಯ್ಕ್, ಮನೋಹರ್ ಕುಮಾರ್ ಎ ಉಪಸ್ಥಿತರಿದ್ದರು.
------
ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130