ಬೆಳ್ತಂಗಡಿ; ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲಕ್ಷ್ಮೀ ಇಂಡಸ್ಟ್ರೀಸ್ (ಲಕ್ಷ್ಮಿ ಗ್ರೂಪ್) ಇದರ “ಕನಸಿನ ಮನೆ” ಶೋರೂಮ್ ಡಿ. 26ರಂದು ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ. ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶುಭಾರಂಭಗೊಳ್ಳಲಿದೆ.ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಪೈ, ಮೋಹನ್ ಕುಮಾರ್
ಉಜಿರೆಯಿಂದ ಚಾರ್ಮಾಡಿ ರಸ್ತೆಯ ಕಾರ್ ಶೋರೂಮ್ ಬಳಿ ಲಕ್ಷ್ಮೀ ಗ್ರೂಪ್ಸ್ ನ ಮಾಲಿಕ ಮೋಹನ್ ಕುಮಾರ್ ಅವರ ಅದ್ಭುತ ಪರಿಕಲ್ಪನೆಯೊಂದಿಗೆ ಉಜಿರೆಗೆ ಹೊಸ ಮೆರುಗು ನೀಡುವಂತೆ ರಚನೆಯಾಗಿರುವ "ಕನಸಿನ ಮನೆ” ಶೋರೂಮ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಇವರು ಶೋರೂಂ ಉದ್ಘಾಟನೆಯನ್ನು ಮಾಡಲಿದ್ದಾರೆ.
ಮಾಲಿಕರಾದ ಮೋಹನ್ ಕುಮಾರ್ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾಕ್ಷೇತ್ರದ ಮಾನ್ಯ ಶಾಸಕ ಹರೀಶ್ ಪೂಂಜ, ಕರ್ನಾಟಕ ಸರ್ಕಾರ ವಿಧಾನ ಪರಿಷತ್ ಶಾಸಕರಾದ ಕೆ ಪ್ರತಾಪ್ ಸಿಂಹ ನಾಯಕ್ ಮತ್ತು ಕೆ ಹರೀಶ್ ಕುಮಾರ್, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ಯು ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್. ಫ್ರೈ.ಲಿ ಬರೋಡ ಇದರ ಶಶಿಧರ್ ಶೆಟ್ಟಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಶೋರೂಂನಲ್ಲಿ ಮನೆಗೆ ಬೇಕಾದ ಫೈಬರ್ ಡೋರ್,ವಕಿಟಕಿ, ಮರದ ಬಾಗಿಲು, ಸ್ಟೀಲ್ ಡೋರ್ ಮುಂತಾದವುಗಳು ಲಭ್ಯವಿದೆ.