Posts

ಕರ್ನಾಟಕ ಮುಸ್ಲಿಂ ಜಮಾಅತ್ ಲಾಯಿಲ ಬ್ಲಾಕ್ ಸಮಿತಿಯಿಂದ ಇಂಡಿಯೋತ್ಸವ ಕಾರ್ಯಕ್ರಮ; || ಸಾಧಕರಿಗೆ, ಸರಕಾರಿ ಸೇವೆಗೈದ ನಿವೃತ್ತರಿಗೆ ಸನ್ಮಾನ

1 min read

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ಲಾಯಿಲ ಗ್ರಾಮ ಸಮಿತಿ ವತಿಯಿಂದ ದೇಶದ 75 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಇಂಡಿಯೋತ್ಸವ -75 ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ, ವಿವಿಧ ಇಲಾಖೆಗಳ ನಿವೃತ್ತ ಸರಕಾರಿ ನೌಕರರಿಗೆ , ಕೊರೋನಾ ವಾರಿಯರ್ಸ್‌ಗೆ  ಅಭಿನಂದನಾ ಕಾರ್ಯಕ್ರಮವು ನಾವೂರು ಮಿಲ್ಕ್ ಸೊಸೈಟಿ ಸಭಾಂಗಣದಲ್ಲಿ ಜರುಗಿತು

ಅಧ್ಯಕ್ಷತೆಯನ್ನು ಮುಸ್ಲಿಂ ಜಮಾಅತ್ ಲಾಯಿಲ ಬ್ಲಾಕ್ ಸಮಿತಿ ಅಧ್ಯಕ್ಷ ಪಿ.ಯು ಆಲಿಕುಂಞಿ ಸಖಾಫಿ ವಹಿಸಿದ್ದರು.

ಕಾರ್ಯಕ್ರಮವನ್ನು ಮುಸ್ಲಿಂ ಜಮಾಅತ್ ತಾ.‌ಅಧ್ಯಕ್ಷ ಎಸ್.ಎಂ ತಂಙಳ್ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಎಂಬಿಎಮ್ ಸಾದಿಕ್ ಮಾಸ್ಟರ್ ಸಂದೇಶ ಭಾಷಣ ಮಾಡಿದರು.

ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಯಾಕೂಬ್ ಮಾಸ್ಟರ್ ಕೊಯ್ಯೂರು,  ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ನಾಯಕ್, ನಡ ಸರಕಾರಿ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಹೆಚ್ ಜೀವಂಧರ ಹೆಗ್ಡೆ, ಬಂಗಾಡಿ ಸಹಕಾರಿ ಸಂಘದ ನಿವೃತ್ತ ಸಿಇಒ ಎ.ಬಿ ಉಮೇಶ್ ಅತ್ತಿಯಡ್ಕ ಇವರನ್ನು ಸನ್ಮಾನಿಸಲಾಯಿತು.

ಕೋವಿಡ್ ವಾರಿಯರ್ಸ್ ಗಳಾಗಿ ಜಾತಿ ಮತ ಭೇದವಿಲ್ಲದೆ ಸೇವೆ ನೀಡಿದ ಝಮೀರ್ ಸ‌ಅದಿ ವಲ್ ಫಾಝಿಲ್, ಪಿ.ಯು ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಸಿರಾಜ್ ಕಾಜೂರು, ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ರಕ್ಷಿತ್ ಎಸ್.ಬಿ, ನಾರೋಗ್ಯ ಸಂರಕ್ಷಣಾಧಿಕಾರಿ ಪುಷ್ಪಲತಾ, ಆಶಾ ಕಾರ್ಯಕರ್ತೆ ಶೋಭಾ ನಡ ಇವರನ್ನು ವಿಶೇಷ ರೀತಿಯಲ್ಲಿ ಪುರಸ್ಕರಿಸಲಾಯಿತು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಪ್ರಾಂಶುಪಾಲ ಡಾ. ಟಿ.ಪಿ ಆಂಟೊನಿ ಶುಭ ಕೋರಿದರು.

ಸಮಾರಂಭದಲ್ಲಿ ಎನ್.ಕೆ ಹಸೈನಾರ್, ಸಯ್ಯಿದ್ ಹಬೀಬ್ ಸಾಹೇಬ್ ಮಂಜೊಟ್ಟಿ, ಪಿ.ಯು ಅಬೂಬಕ್ಕರ್, ಮುತ್ತಲಿಬ್ ಇಂದಬೆಟ್ಟು, ಎನ್.ಹೆಚ್ ಇಬ್ರಾಹಿಂ, ಅಬ್ಬಾಸ್ ನಿಂರ್ದಿ, ಮುಹಮ್ಮದ್ ಮುಸ್ಲಿಯಾರ್ ನಿಂರ್ದಿ, ಅಯ್ಯಿದ್ ಅಯ್ಯೂಬ್, ಕೆ.ಯು ಮುಹಮ್ಮದ್, ಅಬ್ದುಲ್ ರಹಿಮಾನ್ ಮಿತ್ತಬಾಗಿಲು,   ಬಿ.ಪಿ ಹಸೈನಾರ್, ಕೆ.ಪಿ ಮುಹಮ್ಮದ್ ಕಾಜೂರು, ಎನ್ ಹೆಚ್ ಹಮೀದ್ ನಾವೂರು ಮೊದಲಾದವರು ಉಪಸ್ಥಿತರಿದ್ದರು.

ಮುಸ್ಲಿಂ ಜಮಾಅತ್ ತಾ.‌ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಪ್ರಸ್ತಾವನೆಗೈದರು. ಲಾಯಿಲ ಬ್ಲಾಕ್ ಕಾರ್ಯದರ್ಶಿ ಆದಂ ಸಾಹೇಬ್ ನಡ ಕಾರ್ಯಕ್ರಮ ನಿರೂಪಿಸಿದರು. ಝಮೀರ್ ಸ‌ಅದಿ ಲಾಯಿಲ ಸ್ವಾಗತಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment