Posts

ಮಕ್ಕಳ ಮುಂದೆಯೇ ತಂದೆಗೆ ಪಿಕಪ್ ಅಪಘಾತ; ಕೂಲಿ ಕಾರ್ಮಿಕ ರುಕ್ಮ ಮುಗೇರ ದಾರುಣ ಸಾವು

1 min read

ಬೆಳ್ತಂಗಡಿ; ಶಿಬಾಜೆಯಲ್ಲಿ ಪಿಕಪ್ ವಾಹನದ ಚಾಲಕ ವಾಹನವನ್ನು ಅಜಾಗರೂಕತೆಯಿಂದ ಹಿಂದಕ್ಕೆ‌ ತೆಗೆದ ವೇಳೆ ತನ್ನ ಮಕ್ಕಳ ಮುಂದೆಯೇ ಅಪಘಾತ ನಡೆದು ಕೂಲಿ ಕಾರ್ಮಿಕ ರುಕ್ಮ ಮುಗೇರ ಎಂಬವರು ದಾರುಣಾವಾಗಿ ಮೃತಪಟ್ಟಿದ್ದಾರೆ. 

ಮೃತರನ್ನು ಶಿಬಾಜೆ ಗ್ರಾಮದ ನಿವಾಸಿ ಎಂದು ಖಚಿತಪಡಿಸಲಾಗಿದೆ. 

ಇವರು ತನ್ನ ಮಕ್ಕಳೊಂದಿಗೆ ಗೊಬ್ಬರ ಲೋಡ್ ಮಾಡಲೆಂದು ಜಯೇಶ್ ಎಂಬವರ ಪಿಕಪ್ ವಾಹನದಲ್ಲಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಕಪ್ ನಿಲ್ಲಿಸಿ ಅದರಲ್ಲಿದ್ದ ರುಕ್ಮ ಮೊಗೇರ ಹಾಗೂ ಇತರರು ಪಿಕಪ್ ನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ‌ ಪಿಕಪ್ ಚಾಲಕ ವಾಹನವನ್ನು  ಅಜಾಗರೂಕತೆಯಿಂದ ಒಮ್ಮೆಲೇ ಹಿಂದಕ್ಕೆ ತೆಗೆದ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ರುಕ್ಮ ಮೊಗೇರ ಅವರಿಗೆ ಡಿಕ್ಕಿಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದು ಅವರು ಗಂಭೀರ ಗಾಯಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ದುರಾದೃಷ್ಟವಶಾತ್ ಅವರು ಆಸ್ಪತ್ರೆಯ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment