Posts

ಬೆಳ್ತಂಗಡಿ ತಾಲೂಕಿನ‌ ಹೊಸಂಗಡಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ

1 min read


ಬೆಳ್ತಂಗಡಿ:  ಹೊಸಂಗಡಿ ಗ್ರಾಮದ ಮಂಗಳಡ್ಕ ಎಂಬಲ್ಲಿ ಒಂಟಿ ಮಹಿಳೆಯೊಬ್ಬರು ವಾಸವಿರುವ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗಿದ್ದ ಸುಮಾರು ರೂ.1ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಪ್ರಕರಣ  ಸೆ.22 ರಂದು  ಸಂಜೆ ಬೆಳಕಿಗೆ ಬಂದಿದೆ.

ಹೊಸಂಗಡಿ ಗ್ರಾಮದ ಮಂಗಳಡ್ಕ ನಿವಾಸಿ ಜಯಂತಿ ಎಂನವರ ಮನೆಯಲ್ಲೇ ಈ ಕಳ್ಳತನ ಪ್ರಕರಣ ಆಗಿರುವುದು.
 ಸೆ.21 ರಂದು ಸಂಜೆಯ ವೇಳೆಗೆ ಅವರು ಮನೆಗೆ ಬೀಗ ಹಾಕಿ ತಮ್ಮ ಸಹೋದರನ ಮನೆಗೆ ಹೋಗಿದ್ದರು. ನಿನ್ನೆ ಸಂಜೆ ಮರಳಿ ಮನೆಗೆ ಬಂದು ನೋಡಿದಾಗ ಮನೆಗೆ ಕಳ್ಳರು ನುಗ್ಗಿದ ವಿಚಾರ ತಿಳಿದುಬಂದಿದೆ.

ಮನೆ ಬಾಗಿಲಿಗೆ ಹಾಕಲಾದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಬೀರುವನಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ , ಬೆಡ್ ರೂಮ್ ನಲ್ಲಿದ್ದ ಕಪಾಟನ್ನು ಒಡೆದು ಅದರಲ್ಲಿಟ್ಟಿದ್ದ  ಸುಮಾರು 28 ಗ್ರಾಂ ಮೌಲ್ಯದ ಚಿನ್ನಾಭರಣ ಮತ್ತು ರೂ.6ಸಾವಿರ ನಗದನ್ನು ಕಳವುಗೈದಿದ್ದಾರೆ.

ಈ ಬಗ್ಗೆ ಜಯಂತಿ ರವರು ವೇಣೂರು ಪೊಲೀಸ್ ಠಾಣೆಗೆ ದೂರುನೀಡಿದ್ದಾರೆ.  ಸ್ಥಳಕ್ಕೆ ಬೇಟಿ ನೀಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment