ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಆಡಳಿತಕ್ಕೊಳಪಟ್ಟು ರಹ್ಮಾನಿಯಾ ಆಂಗ್ಲಮಾಧ್ಯಮ ಶಾಲೆ ಮತ್ತು ರಹ್ಮಾನಿಯಾ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಇದರ ಉದ್ಘಾಟನೆಯು ಸೋಮವಾರ ನಡೆಯಿತು.
ಕಾಜೂರು ಜಮಾಅತ್ ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕೆಪಿಎಸ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಶುಭಾಶಂಸನೆಗೈದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು.
ಸಮಾರಂಭದಲ್ಲಿ ಕಿಲ್ಲೂರು ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್, ಉಜಿರೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಬಿ.ಎಮ್ ಹಮೀದ್, ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ನೆಕ್ಕರೆ, ಲೈವ್ ಮೀಡಿಯಾ ನ್ಯೂಸ್ ಚಾನೆಲ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ, ಕಾಜೂರು ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ನಿರ್ದೇಶಕರಾದ ಬದ್ರುದ್ದೀನ್, ಉಮರ್‌ಕುಂಞಿ, ಮುಹಮ್ಮದ್ ಅಲಿ, ಅಬ್ದುಲ್ ಖಾದರ್, ಅಬ್ಬಾಸ್, ಯಾಕೂಬ್, ಸಿದ್ದೀಕ್ ಕೆ. ಹೆಚ್, ಮಾಜಿ ಅಧ್ಯಕ್ಷರುಗಳಾದ ಕೆ.ಯು ಉಮರ್ ಸಖಾಫಿ ಮತ್ತು ಬಿ.ಎ ಯೂಸುಫ್ ಶರೀಫ್ ಇವರು ಉಪಸ್ಥಿತರಿದ್ದರು.
ಕಾಜೂರು ಮುದರ್ರಿಸ್ ಅಬ್ದುಲ್ ಖಾದರ್ ಸಅದಿ, ಪ್ರಭಾರ ಮುಖ್ಯೋಪಾಧ್ಯಾಯ ಆಶಿಕ್ ಸಖಾಫಿ, ಶರೀಫ್ ಸಖಾಫಿ ದಿಡುಪೆ, ಬಶೀರ್ ಬಾಹಸನಿ ಕುಕ್ಕಾವು, ಖಲಂದರ್ ಸಅದಿ ಜಿ. ನಗರ, ಆಸಿಫ್ ಮದನಿ ಕಾಜೂರು, ಸದರ್ ರಶೀದ್ ಮದನಿ, ಮುಸ್ತಫಾ ಮುಸ್ಲಿಯಾರ್, ಕಚೇರಿ ವ್ಯವಸ್ಥಾಪಕ ಶಮೀಮ್, ಝುಬೈರ್ ಮುಸ್ಲಿಯಾರ್, ಶಮೀರ್ ಮಾಸ್ಟರ್, ಪ್ರೌಢ ಶಾಲಾ ಶಿಕ್ಷಕಿಯರಾದ ಸುಹೈಮಾ ಮತ್ತು ಶಮೀರಾ, ಶರೀಅತ್ ಶಿಕ್ಷಕಿಯರಾದ ತಸ್ಕಿಯಾ ಮತ್ತು ಮುಬಶ್ಶಿರ, ಇಂಗ್ಲೀಷ್ ಮೀಡಿಯಂ ಶಿಕ್ಷಕಿ ಝುಹುರಾ ಇವರು ಭಾಗಿಯಾಗಿದ್ದರು.