Posts

ಅಕಾಲಿಕವಾಗಿ ಅಗಲಿದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೀವ ಗೌಡರಿಗೆ ಕ್ಲಬ್ ವತಿಯಿಂದ ನುಡಿನಮನ

0 min read

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನಗಲಿದ ರಾಜೀವ ಡಿ ಗೌಡ ಅವರಿಗೆ ಲಯನ್ಸ್ ಕ್ಲಬ್ ಬೆಳ್ತಂಗಡಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.


ಲಯನ್ಸ್ ವಲಯಾಧ್ಯಕ್ಷ ವಸಂತ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ಸ್ಥಾಪಕ ಸದಸ್ಯ ಎಂ.ಜಿ ಶೆಟ್ಟಿ,‌‌ ಮಾಜಿ ಪ್ರಾಂಂತ್ಯ ಅಧ್ಯಕ್ಷರುಗಳಾದ  ನಿತ್ಯಾನಂದ ನಾವರ ಮತ್ತು ರಾಜು ಶೆಟ್ಟಿ, ರಾಮಕೃಷ್ಣ ಗೌಡ, ಶುಭಾಷಿಣಿ, ಮಾಜಿ ಅಧ್ಯಕ್ಷರಾದ ಮೇದಿನಿ ಡಿ ಗೌಡ, ಪಾಲಾಕ್ಷ ಸುವರ್ಣ,  ಜಯರಾಮ ಭಂಡಾರಿ ಧರ್ಮಸ್ಥಳ,,

ಇವರುಗಳು ನುಡಿನಮನ ಸಲ್ಲಿಸಿದರು.


ಬಳಿಕ ಸಂಘದ ಸದಸ್ಯರೆಲ್ಲರೂ ರಾಜೀವ ಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಿದರು
. ಲಯನ್ಸ್  ಕ್ಲಬ್ ವತಿಯಿಂದ ಅವರ ಮನೆಗೆ ಸಮರ್ಪಿಸಲು ಸಿದ್ದಪಡಿಸಿದ ಸಂತಾಪ ಪತ್ರವನ್ನು ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ ವಾಚಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment