Posts

ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಜು.8 ರ ವರೆಗೆ ಅವಕಾಶ ಕ್ಷೇತ್ರವಾರು ಮಾಹಿತಿಯ ಸಂಪೂರ್ಣ ವಿವರ ಇಲ್ಲಿದೆ

1 min read


ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್‌ಗಳಿಗೆ  ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಮೀಸಲಿರಿಸಿ ಸರ್ಕಾರ ನೂತನ ಕರಡು ಅಧಿಸೂಚನೆ ಹೊರಡಿಸಿದ್ದು , ಈ ಕುರಿತು ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ .


ರಾಜ್ಯದಲ್ಲಿ ಹೊಸದಾಗಿ ಒಟ್ಟು 56 ತಾಲ್ಲೂಕುಗಳು ರಚಣೆಯಾಗಿರುವುದರಿಂದ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದ್ದ ಪ್ರತಿ 10 ಸಾವಿರ ಜನ ಸಂಖ್ಯೆಗೆ ಬದಲಾಗಿ ಪ್ರತಿ 12,500 ರಿಂದ 15‌ಸಾವಿರ ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಿದೆ .


ಈ ಹಿಂದೆ ಇದ್ದ ಒಟ್ಟು 3,903 ತಾಲ್ಲೂಕು ಪಂಚಾಯತ್ ಕ್ಷೇತ್ರಗಳು ಮಾತ್ರ ಇರುವ ಕಾರಣ ಹಾಗೂ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶವಾಗಿ ಪರಿವರ್ತಿತವಾಗಿದ್ದು , ಬೌಗೋಳಿಕವಾಗಿ ಕ್ಷೇತ್ರದ ವ್ಯಾಪ್ತಿ ಬದಲಾವಣೆ ಆಗಿರುವುದರಿಂದ ರಾಜ್ಯದ ಎಲ್ಲಾ ತಾಲೂಕು ಪಂಚಾಯತ್ ಗಳ ಮೀಸಲಾತಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ ನಿಯಮಗಳು 2021 ರ ನಿಯಮ 5 ( ಬಿ ) ರಂತೆ ಹೊಸ ಮತಕ್ಷೇತ್ರಗಳೆಂದು ಪರಿಗಣಿಸಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸಿ ನಿಗದಿಪಡಿಸಲು ತೀರ್ಮಾನಿಸಿದೆ .



ಮಂಗಳೂರು ತಾಲೂಕಿನ 12 ಕ್ಷೇತ್ರಗಳು , ಮೂಲ್ಕಿ ತಾಲೂಕಿನ 11 ಕ್ಷೇತ್ರಗಳು , ಉಳ್ಳಾಲ ತಾಲೂಕು ಪಂಚಾಯತ್‌ನ 10 ಕ್ಷೇತ್ರಗಳು , ಬಂಟ್ವಾಳದ 24 ಕ್ಷೇತ್ರಗಳು , ಮೂಡಬಿದಿರೆಯ 11 ಕ್ಷೇತ್ರಗಳು ,ಪುತ್ತೂರಿನ 11 ಕ್ಷೇತ್ರಗಳು , ಸುಳ್ಯ ತಾಲೂಕಿನ 9 ಕ್ಷೇತ್ರಗಳು , ಬೆಳ್ತಂಗಡಿ ತಾಲೂಕಿನ 21 ಕ್ಷೇತ್ರಗಳು ಹಾಗೂ ಕಡಬ ತಾಲೂಕಿನ 9 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ .2021 ರ ನಿಯಮ 6 ರನ್ವಯ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 01-07-2021 ರಿಂದ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ . ಒಂದು ವೇಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ದಿನಾಂಕ : 08-07-2021 ರೊಳಗೆ ಚುನಾವಣಾ ಆಯೋಗಕ್ಕೆ ತಲುಪುವಂತೆ ಸಲ್ಲಿಸಲು ಅವಕಾಶ ನೀಡಲಾಗಿದೆ .


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment