ಸಿಸಿ ಟಿವಿ ಪುಟೇಜ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ತನ್ನ ಜೊತೆಗಾರ ನೀರಿನಲ್ಲಿ ಮುಳುಗಿದ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದೂ ಘಟನೆ ಬಗ್ಗೆ ಮಾಹಿತಿ ಮುಚ್ಚಿಟ್ಟು ಸಂಶಯಾಸ್ಪದವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ರಮೇಶ್ ಹಾಗೂ ಸುಂದರ ಶೆಟ್ಟಿ ಸೋಮವಾರ ಸಂಜೆ ಸೋಮಾವತಿ ನದಿಗೆ ಮೀನು ಹಿಡಿಯಲೆಂದು ಒಟ್ಟಿಗೇ ತೆರಳಿದ್ದರು. ತಡರಾತ್ರಿ ಮನೆಗೆ ಮರಳುತ್ತಿದ್ದ ರಮೇಶ ಮಂಗಳವಾರ ವಾದರೂ ಮನೆಗೆ ಮರಳಿರಲಿಲ್ಲ. ಅಲ್ಲದೆ ಬೆಳಿಗ್ಗೆ 10 ಗಂಟೆಯ ನಂತರ ಅವರ ಮೊಬೈಲ್ ಫೋನ್ ಸ್ವಿಚ್ಚ್ ಆಫ್ ಆಗಿತ್ತು. ಇದರಿಂದ ದುಗುಡಕ್ಕೊಳಗಾದ
ರಮೇಶನ ಮನೆಯವರು ನಾಪತ್ತೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಹಿನ್ನಲೆಯಲ್ಲಿ ಎಸ್‌ಐ ನಂದ ಕುಮಾರ್ ಅವರ ತಂಡ ಹುಡುಕಾಟ ಪ್ರಾರಂಭಿಸಿತ್ತು. ಬೆಳ್ತಂಗಡಿಯ ಸೋಮಾವತಿ ನದಿಗೆ ಹೋಗುವ ದಾರಿಯ ಬಳಿ ಸಿಸಿ ಟಿವಿ ಪುಟೇಜ್ ಪರಿಶೀಲನೆ ನಡೆಸಿದಾಗ ಅಸ್ಪಷ್ಟ ಚಿತ್ರಣ ಸಿಕ್ಕಿತ್ತು. ಬಳಿಕ ಉಜಿರೆಯಲ್ಲಿ ಸಿಸಿ ಪೂಟೇಜ್ ಪರಿಶೀಲನೆ ನಡೆಸಿದಾಗ ರಮೇಶ್ ಹಾಗೂ ಜತೆಯಲ್ಲಿ ಇನ್ನೊಬ್ಬ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಒಟ್ಟಿಗೆ ತೆರಳಿದ್ದು, ಬೆಳ್ತಂಗಡಿ ಸೇತುವೆ ಬಳಿ ಇಳಿದ ಮಾಹಿತಿ ಸಿಕ್ಕಿತು. ಬಳಿಕದ ಹುಡುಕಾಟದಲ್ಲಿ ರಮೇಶ್ ಅವರ ಮೃತದೇಹ ಸಿಕ್ಕಿತ್ತು. ಆ ಬಳಿಕ ಸುಂದರ ಶೆಟ್ಟಿ ಎಂಬಾತನನ್ನು ಬಂಧಿಸಿ ಎಫ್ ಐ ಆರ್ ದಾಖಲಿಸಿದ್ದಾರೆ.