ಬೆಳ್ತಂಗಡಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಇದರ ಬೆಳ್ತಂಗಡಿ ಘಟಕದ ಮುಂದಿನ ಅವಧಿಯ ಅಧ್ಯಕ್ಷರಾಗಿ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿಯಾಗಿ ಅಬೂಬಕ್ಕರ್ ಯು.ಹೆಚ್, ಕೊಶಾಧಿಕಾರಿಯಾಗಿ ವೈಕುಂಠ ಪ್ರಭು ಇವರ ತಂಡ ಪದಗ್ರಹಣಗೊಂಡಿದ್ದು, ನೂತನ ತಂಡದ ಸೇವಾ ಚಟುವಟಿಕೆಗಳಿಗೆ ಜು.1 ರಂದು ಅಧಿಕೃತ ಚಾಲನೆ ಲಭಿಸಿದೆ.
ತಂಡದ ಇತರ
ಪ್ರಮುಖ ಹುದ್ದೆಗಳಾದ ಸಾಂರ್ಜೆಟ್ ಅಟ್ ಆರ್ಮ್ಸ್ ಕೆ.ಪಿ ಪ್ರಸಾದ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಶ್ರವಣ್ ಕಾಂತಾಜೆ, ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ಡಾ.ಗೋಪಾಲಕೃಷ್ಣ, ಒಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಮನೋರಮಾ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಪುರಂದರ ರಾವ್, ಯೂತ್ ಸರ್ವಿಸ್ ನಿರ್ದೇಶಕರಾಗಿ ಅನಂತ ಭಟ್, ಪಲ್ಸ್ ಪೋಲಿಯೊ ಚೇರ್ಮೆನ್ ಆಗಿ ಡಾ. ಶಶಿಕಾಂತ ಡೋಂಗ್ರೆ, ಟಿ.ಆರ್.ಎಫ್ ಚೇರ್ಮೆನ್ ಆಗಿ ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ಮೆಂಬರ್ಷಿಪ್ ಡೆವಲಪ್ಮೆಂಟ್ ಚೇರ್ಮೆನ್ ಆಗಿ ರಕ್ಷಾ ರಾಗ್ನೇಶ್, ವಿನ್ಸ್ ಚೇರ್ಮೆನ್ ಆಗಿ ಅರುಣ್ ಕುಮಾರ್ ಎಂ.ಎಸ್, ಜಿಲ್ಲಾ ಕಾರ್ಯಕ್ರಮ ಚೇರ್ಮೆನ್ ಆಗಿ ಪೂರಣ್ ವರ್ಮಾ, ಟೀಚ್ ಚೇರ್ಮೆನ್ ಆಗಿ ಡಿ.ಎಮ್ ಗೌಡ, ವಾಟರ್ ಮತ್ತು ಸೇನಿಟೈಸರ್ ಚೇರ್ಮೆನ್ ಆಗಿ ಮಿಥುನ್ ಮಾಡ್ತಾ, ಕ್ರೀಡಾ ಚೆರ್ಮೆನ್ ಆಗಿ ಶ್ರೀನಾಥ್ ಕೆ.ಎಂ, ಇಂಟರಾಕ್ಟ್ ಚೇರ್ಮೆನ್ ಆಗಿ ಪ್ರಕಾಶನಾರಾಯಣ, ರೋಟರಾಕ್ಟ್ ಚೇರ್ಮೆನ್ ಆಗಿ ಕೇಶವ ಪೈ, ಸಾಂಸ್ಕೃತಿಕ ಕಾರ್ಯಕ್ರಮಗಳ ಚೇರ್ಮೆನ್ ಆಗಿ ಬಿ.ಕೆ ಧನಂಜಯ ರಾವ್, ಆರ್‌ಸಿಸಿ ಚೇರ್ಮೆನ್ ಆಗಿ ವೆಂಕಟೇಶ್ವರ ಕಜೆ, ಪಿಆರ್ ಮತ್ತು ಡಿಜಿಟಲ್ ಅಸಿಸ್ಟೆಂಟ್ ಆಗಿ ಶ್ರೀಧರ ಕೆ.ವಿ ಮತ್ತು ರೋಟರ್ ಎಡಿಟರ್ ಆಗಿ ಡಾ. ಎ ಜಯಕುಮಾರ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.