Posts

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅ.29, 30: ಶೋಧ -2022 ವಿಜ್ಞಾನ ಮೇಳ, ಅಕ್ಷರೋತ್ಸವ ಸಾಹಿತ್ಯ ಮೇಳ ರಾಜ್ಯ ಮಟ್ಟದ ಕಾರ್ಯಕ್ರಮಗಳು

2 min read

ಬೆಳ್ತಂಗಡಿ; ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಅ.29 ರಂದು ರಾಜ್ಯಮಟ್ಟದ ವಿಜ್ಞಾನ ಮೇಳ ಹಾಗೂ ಅ. 30ರಂದು ರಾಜ್ಯಮಟ್ಟದ ಅಕ್ಷರೋತ್ಸವ ಸಾಹಿತ್ಯ ಮೇಳ ಗುರುವಾಯನಕೆರೆ ಎಕ್ಸಲ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್‌ ಕುಮಾರ್‌ ಜೈನ್ ತಿಳಿಸಿದರು.

ಕಾಲೇಜಿನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು.


ಅ. 29ರಂದು ಬೆಳಗ್ಗೆ 9.30ಕ್ಕೆ ಶೋಧ ವಿಜ್ಞಾನ ಮೇಳಕ್ಕೆ ವಿಧಾನ ಪರಿಷತ್ ಶಾಸಕ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮಂಜುನಾಥ ಭಂಡಾರಿ ಚಾಲನೆ ನೀಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ವಿರೂಪಾಕ್ಷಪ್ಪ, ಉಜಿರೆ ಅನುಗ್ರಹ  ಪ. ಪೂ ಕಾಲೇಜಿನ ಪ್ರಾಂಶುಪಾಲ ಫಾ| ವಿಜಯ್ ಲೋಬೋ, ಹೋಲಿ ರಿಡೀಮರ್ ಶಾಲೆಯ ಮುಖ್ಯಶಿಕ್ಷಕ ಫಾ| ಕ್ಲಿಫರ್ಡ್ ಸೈಮನ್ ಪಿಂಟೋ, ಮಡಂತ್ಯಾರು ಸೇ.ಹಾ. ಶಾಲೆಯ ಮುಖ್ಯಶಿಕ್ಷಕ ಮೋಹನ್ ನಾಯಕ್ ಅತಿಥಿಗಳಾಗಿ ಭಾಗವಹಿಸುವರು.

ಈ ದಿನದ ಸಮಾರಂಭದಲ್ಲಿ ಡಾ| ವೇಣುಗೋಪಾಲ್ ಶರ್ಮ ಗುರುವಾಯನಕೆರೆ, ಉದ್ಯಮಿ ಉಡುಪಿಯ ಶ್ರೀನಿವಾಸ್ ಶೆಟ್ಟಿಗಾರ್, ಪ್ರಾಧ್ಯಾಪಕ ಹರೀಶ್ ಶಾಸ್ತ್ರಿ ನಾಟಿ ವೈದ್ಯ ತೆಂಕಕಾ ರಂದೂರಿನ ಕೃಷ್ಣ ನಾಯ್ಕರನ್ನು ಸಮ್ಮಾನಿಸಲಾಗುವುದು ಎಂದರು.


ಅಪರಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಪ್ರಶಸ್ತಿ ವಿತರಿಸಲಿದ್ದು, ಮಂಗಳೂರಿನ ಡಿಡಿಪಿಐ ಜಯಣ್ಣ, ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಡಾ| ಕೆ.ವಿ.ರಾವ್, ಮೂಡುಬಿದಿರೆ ಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಉಜಿರೆ ಎಸ್‌ಡಿಎಂ ಸೆಕಂಡರಿ ಶಾಲೆಯ ಮುಖ್ಯಶಿಕ್ಷಕ ಪದ್ಮರಾಜ್, ಗುರುದೇವ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುಕೇಶ್‌ ಕುಮಾರ್, ಬೆಳ್ತಂಗಡಿ ವಾಣಿ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮೀ ನಾರಾಯಣ ಉಪಸ್ಥಿತರಿರುವರು ಎಂದರು.

ಅಕ್ಟೋಬರ್ 30 ರಂದು "ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ-ಸಾಹಿತ್ಯ ಸಾಧ್ಯತೆ ಸವಾಲುಗಳು" ಎಂಬ ಪರಿಕಲ್ಪನೆಯಲ್ಲಿ ಅಕ್ಷರೋತ್ಸವ- ರಾಜ್ಯಮಟ್ಟದ ಸಾಹಿತ್ಯ ಮೇಳ‌ನಡೆಯಲಿದೆ.

ಮಡಂತ್ಯಾರು ಸೇ.ಹಾ.ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಜೋಸೆಫ್ ಎನ್.ಎಂ. ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ.  ಪುಂಜಾಲಕಟ್ಟೆ, ಸ.ಪ.ಕಾಲೇಜಿನ ಪ್ರಾಂಶುಪಾಲ ಡಾ| ಟಿ.ಕೆ.ಶರತ್ ಕುಮಾರ್ ಕನ್ನಡ ಧ್ವಜಾರೋಹಣ, ಬೆಳ್ತಂಗಡಿ ಗುರುದೇವ ಪ.ಕಾಲೇಜಿನ ಪ್ರಾಂಶುಪಾಲೆ ಡಾ| ಸವಿತಾ ಕಾಲೇಜಿನ ಧ್ವಜಾರೋಹಣ ನೆರವೇರಿಸಲಿರುವರು. 

ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಸಮಾರಂಭದ ದೀಪ ಪ್ರಜ್ವಲಿಸಲಿದ್ದಾರೆ. ಉಜಿರೆ ಎಸ್‌.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಎನ್ ಉದಯಚಂದ್ರ 'ಅಕ್ಷರೋತ್ಸವ ಕವಿತೆಗಳು ಭಾಗ 1 ಲೋಕಾರ್ಪಣೆಗೊಳಿಸಲಿದ್ದಾರೆ‌ ಎಸ್‌ಡಿಎಂ ಕಾಲೇಜಿನ ವಿಶ್ರಾಂತ ಕುಲಸಚಿವ ಡಾ| ಬಿ.ಪಿ. ಸಂಪತ್‌ ಕುಮಾರ್, ಕಾವ್ಯಯಾನ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಕೇಶವ ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಲತಾ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಉದ್ಯಮಿ ಶಮಂತ್ ಕುಮಾರ್ ಜೈನ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್ ಉಪಸ್ಥಿತರಿರಲಿದ್ದಾರೆ. ಸಂಜೆ 

'ನವ ಮಾಧ್ಯಮ-ಭಾಷೆ ಮತ್ತು ಸಾಹಿತ್ಯದ ಭವಿಷ್ಯ' ದ ಕುರಿತು ಸಾಹಿತಿ ಡಾ| ನರೇಂದ್ರ ರೈ ದೇರ್ಲ ಉಪನ್ಯಾಸ ನೀಡಲಿದ್ದಾರೆ ಎಂದರು.

ಮಧ್ಯಾಹ್ನ 12ಕ್ಕೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆ ನಡೆಯಲಿದ್ದು, ಕಸಾಪ ರಾಜ್ಯಾಧ್ಯಕ್ಷ, ನಾಡೋಜಾ ಡಾ| ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಎಕ್ಸೆಲ್ ಅಕ್ಷರ ಗೌರವ ಸಮರ್ಪಿಸಲಿದ್ದಾರೆ. 

ಬರೋಡ ತುಳು ಸಂಘದ ಅಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಕಸಾಪ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್, ತಾಲೂಕು ಕಸಾಪ ಅಧ್ಯಕ್ಷ ಡಿ. ಯದುಪತಿ ಗೌಡ ಮುಖ್ಯಅತಿಥಿಯಾಗಿ ಉಪಸ್ಥಿತ ರಿರುವರು. ಬೆಳ್ತಂಗಡಿ ಸ.ಪ.ಕಾಲೇಜಿನ ಪ್ರಾಂಶುಪಾಲ ಡಾ| ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಹಿರಿಯ ಪತ್ರಕರ್ತ ಆರ್.ಎನ್. ಪೂವಣಿ, ಸಾಹಿತಿ ಡಾ| ಎಚ್.ಜಿ. ಶ್ರೀಧರ್ ಮುಂಡಿಗೆಹಳ್ಳಿ, ಹಿರಿಯ ಸಂಶೋಧಕ ಡಾ| ತುಕರಾಮ ಪೂಜಾರಿ ಬಂಟ್ವಾಳ, ಮೈಸೂರು ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್, ತಾಂತ್ರಿಕ ಪರಿಣಿತ ಡಾ| ಶಿವಪ್ರಸಾದ್‌, ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು, ಗ್ರಂಥಾಲಯ ಅಧಿಕಾರಿ ನಳಿನಿ ಐ.ಬಿ, ಕೃಷಿಕ ಧನಕೀರ್ತಿ ಬಲಿಪ ಮೂಡುಬಿದಿರೆ, ದೈವನರ್ತಕ ಆಶೋಕ ಪರವ ಬೊಳಂಬಾರ್ ಅವರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಿಸಲಾಗುವುದು ಎಂದರು.

ಮಧ್ಯಾಹ್ನ 2ಕ್ಕೆ ವಿಮರ್ಶಕಿ ಡಾ| ವಿಜಯಲಕ್ಷ್ಮೀ ಬಸವರಾಜ ಪಲೋಟಿಯವರ ಸಮನ್ವಯಕಾರರ ಉಪಸ್ಥಿತಿಯಲ್ಲಿ ಆಯ್ದ ಕವನಗಳ ವಾಚನ-ಗಾಯನ-ನೃತ್ಯ-ಕುಂಚದ ರಾಜ್ಯ ಮಟ್ಟದ ಕವಿ ಗೋಷ್ಠಿ ನಡೆಯಲಿದೆ. ಸಂಶೋಧಕ ಡಾ| ರತ್ನಾಕರ್ ಮಲ್ಲಮೂಲೆ ಉಪಸ್ಥಿತಿಯಲ್ಲಿ 'ಸಾಹಿತ್ಯ ಭಾವ-ಭಾಷೆ-ಬದುಕು' ಕುರಿತು ಉಪನ್ಯಾಸ ನಡೆಯಲಿದೆ. ಸಂಜೆ ಹಾಸ್ಯ ನಾಟಕ "ಮೂರುಮುತ್ತು" ಪ್ರದರ್ಶನಗೊಳ್ಳಲಿದೆ ಎಂದರು 

ಕಾರ್ಯಕ್ರಮಗಳು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರ ಅಧ್ಯಕ್ಷತೆ ಮತ್ತು ನೇತೃತ್ವದಲ್ಲಿ ನಡೆಯಲಿದೆ ಎಂದು‌ ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಗಳ

ಪ್ರಾಂಶುಪಾಲ ಡಾ| ನವೀನ್‌ ಕುಮಾರ್ ಮರಿಕೆ, ಪ್ರಾಧ್ಯಾಪಕ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

----------

ವರದಿ; ಅಚ್ಚು ಮುಂಡಾಜೆ- 9449640130

(ನಿಮ್ಮ ವರದಿ, ಕಾರ್ಯಕ್ರಮಗಳು ಮತ್ತು ಸಾಧನೆಗಳನ್ನು ನಮಗೆ ಕಳಿಸಿಕೊಡಿ)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment