ಬೆಳ್ತಂಗಡಿ; ಉಡುಪಿಯ ಕಾರು ಶೋರೂಂ ನಲ್ಲಿ ಕೆಲಸಕ್ಕಿದ್ದ ಉಜಿರೆಯ ರೆಂಜಾಲ ಎರ್ನೋಡಿ ಸಮೃದ್ದಿ ಮನೆಯ ನಿವಾಸಿ ದಿವ್ಯಶ್ರೀ (24) ರವರು ಏಪ್ರಿಲ್ 15 ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಅವರ ತಂದೆ ನಾಗೇಶ್ ಸಮಗಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ವಿಧ್ಯಾಭ್ಯಾಸ ಮುಗಿಸಿ ಉಡುಪಿಯ ಮಾರುತಿ ಶೋರೂಂ ನಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಶ್ರೀ ಪ್ರಸ್ತುತ ವರ್ಕ್ ಫ್ರಂ ಹೋಂ ಎಂದು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು.ಈ ಮಧ್ಯೆ 15 ದಿನಗಳಿಗೊಮ್ಮೆ ಉಡುಪಿಗೆ ಹೋಗಿ ಬರುತ್ತಿದ್ದರು. ಅಂತೆಯೇ ಏ 11 ರಂದು ಬೆಳಿಗ್ಗೆ 8.30 ಕ್ಕೆ ಉಡುಪಿಗೆಂದು ಮನೆಯಿಂದ ಹೋದವರು ಸಂಬಂಧಿಕರ ಮನೆಯಾದ ಬಜಗೋಳಿಯ ಆಕೆಯ ಚಿಕ್ಕಮ್ಮ ಭಾರತಿರವರ ಮನೆಯಲ್ಲಿ 3-4 ದಿನ ಉಳಿದುಕೊಂಡಿದ್ದರು. ಅಲ್ಲಿಂದ ಏಪ್ರಿಲ್ 15 ರಂದು ಬೆಳಿಗ್ಗೆ 7.30 ಕ್ಕೆ ಬಜಗೋಳಿಯಲ್ಲಿಂದ ಕುಂದಾಪುರಕ್ಕೆ ಹೋಗಿ ಬರುತ್ತೇನೆಂದು ಆಕೆಯ ಚಿಕ್ಕಮ್ಮ ಭಾರತಿಯವರಲ್ಲಿ ಹೇಳಿ ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. ಆಕೆಯು ಪೋನ್ ಕೂಡ ಸ್ವಿಚ್ ಆಫ್ ಆಗಿದೆ. ಆಕೆ ತೆರಳುವ ವೇಳೆ ಆಕೆಗೆ ಸಂಬಂಧಪಟ್ಟ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನೂ ಕೂಡ ಒಯ್ದಿದ್ದಾರೆ ಎಂದು ಆಕೆಯ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.