ವಿಟ್ಲ: ತಮ್ರೀನುತ್ತುಲಬಾ ಮದ್ರಸಾ ಕೊಡಂಗೆಯಲ್ಲಿ ಮದ್ರಸಾ ವಿದ್ಯಾರ್ಥಿಗಳ ಸಂಘಟನೆಯಾದ ಸುನ್ನೀ ಬಾಲ ಸಂಘ (ಎಸ್‌ಬಿಎಸ್) ಗೆ ಸ್ಥಳೀಯ ಖತೀಬ್ ಇಬ್ರಾಹಿಂ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಮದ್ರಸಾ ಮುಖ್ಯೋಪಾಧ್ಯಾಯ ಪಿ.ಎ.ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘಟನೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಹಿದ್ ಕೊಡಂಗೆ, ಉಪಾಧ್ಯಕ್ಷರಾಗಿ ನಿಝಾಮುದ್ದೀನ್ ಹಾಫಿಳ್, ಪ್ರ.ಕಾರ್ಯದರ್ಶಿಯಾಗಿ ಸವಾದ್, ಜೊತೆ ಕಾರ್ಯದರ್ಶಿಯಾಗಿ ಅನಸ್ ಶಾಮಿಲ್, ಕೋಶಾಧಿಕಾರಿ ಯಾಗಿ ಹಾಝಿಲ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನವಾಝ್ , ಶಾಹಿಲ್ , ಇಹ್ಸಾನ್, ಅಬ್ದುಲ್ ಅಝೀಝ್ , ಹಾಶಿರ್ ಪಿ. ಹಾಗೂ ಜವಾದ್, ವಿದ್ಯಾರ್ಥಿ ನಾಯಕರಾಗಿ ಅನ್ವರ್ ಹಾಗೂ ಮುಝಮ್ಮಿಲ್ ಆಯ್ಕೆಯಾದರು.
ಮದ್ರಸಾ ಅಧ್ಯಾಪಕ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಬಕ ಉಪಸ್ಥಿತರಿದ್ದರು.ಪ್ರ.ಕಾರ್ಯದರ್ಶಿ ಸವಾದ್ ಒಕ್ಕೆತ್ತೂರು ಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.