Posts

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ 89 ನೇಯ ಸಾಹಿತ್ಯ ಸಮ್ಮೇಳನ || ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಂದ ಉದ್ಘಾಟನೆ

2 min read

ಬೆಳ್ತಂಗಡಿ; ಜಾನಪದ ಕಲೆಗಳ ಮೂಲಕ ಉತ್ತರ ಕರ್ನಾಟಕ ಭಾಗ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದರೆ,  ಕರಾವಳಿಯ ಭಾಗ ನಾಟಕ, ಕಂಬಳ ಮತ್ತು ಯಕ್ಷಗಾನದಂತಹಾ ಶ್ರೀಮಂತ ಕಲೆಗಳ ಮೂಲಕ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ ಸುಧಾಕರ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಗಲ ಪರ್ವದಲ್ಲಿ ಶ್ರೀ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ  ಸಮ್ಮೇಳನದ 89ನೆ ಅಧಿವೇಶನ ಶನಿವಾರ ಅಮೃತವರ್ಷಿಣಿ ಸಭಾಂಗಣದಲ್ಲಿ ವೈಭವಪೂರ್ಣವಾಗಿ ಜರುಗಿದ್ದು, ಸಮ್ಮೇಳನ ಉದ್ಘಾಟಿಸಿದ ಅವರು ಮಾತನಾಡುತ್ತಿದ್ದರು.

ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದೇ ಒಂದು ಹೆಮ್ಮೆಯ ವಿಚಾರ. ಕುವೆಂಪು ಅವರು, ಕಾರಂತರು, ಗಿರೀಶ್ ಕಾರ್ನಾಡ್ ಅವರು, ದ.ರಾ ಬೇಂದ್ರೆಯವರ ಸಾಹಿತ್ಯ ನಿತ್ಯ ಅನುಕರಣೀಯವಾದುದು ಎಂದ ಸಚಿವರು, ಅವರೆಲ್ಲರೂ ತಮ್ಮ ಸ್ವಂತ ಅನುಭವವನ್ನೇ ಸಾಹಿತ್ಯವಾಗಿಸಿದ್ದಾರೆ ಎಂದರು.

ಘನ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಹಿರಿಯ ಸಾಹಿತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್, ಆಧುನಿಕ ಸಾಹಿತ್ಯ ಕೇವಲ ಕ್ಷಣದ ರಂಜನೆಗೆ ಮಾತ್ರ ಸೀಮಿತವಾಗಿದೆ. ಸಾಹಿತ್ಯದಲ್ಲಿ ಬೌದ್ಧಿಕ ಮತ್ತು ಹೃದಯಕ್ಕೆ ಸೇರಿದ್ದು ಎಂಬ ಎರಡು ವಿಧ ಇದೆ. ಸಾಹಿತ್ಯವನ್ನು ಅಂತರಂಗದ ಅರಿವಿನ ಸ್ಪೋಟ ಎಂದು ತಿಳಿದುಕೊಳ್ಳಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಪ್ರಸ್ತಾವನೆಗೈದು, 

ಧರ್ಮ ಮತ್ತು ಸಾಹಿತ್ಯ ಮಾನವರ ಏಳಿಗೆಗೆ ಪೂರಕ ಮತ್ತು ಪ್ರೇರಕ. ಧರ್ಮಸ್ಥಳದಲ್ಲಿ ಆಚರಿಸುವ ಸಾಹಿತ್ಯ ಸಮ್ಮೇಳನಗಳ ಉದ್ಧೇಶವೂ ಸರ್ವರ ಹಿತ ಹಾಗೂ ಸಹಬಾಳ್ವೆಯ ಜನತೆಗೆ ಭಾಷಾ ಸಾಮರಸ್ಯ, ಭಾಷಾಭಿಮಾನದ ಜೊತೆಗೆ ಮಾನವೀಯ ಗುಣಗಳ ಉದ್ದೀಪನ, ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ. ಉತ್ತಮ‌ ಸಾಹಿತ್ಯದ ಅಧ್ಯಯನದಿಂದ ಮಾನವನ ಬದುಕಿಗೆ ಆವಶ್ಯಕವಾದ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳ ಪ್ರೇರಣೆ ದೊರೆಯುತ್ತದೆ ಎಂದರು.ಧರ್ಮಸ್ಥಳದಲ್ಲಿ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಅನೇಕ ಪುರಾತನ ಹಸ್ತಪ್ರತಿಗಳು, ಸಾವಿರಾರು ಗ್ರಂಥಗಳು, ಅನೇಕ ಸುಪ್ರಸಿದ್ಧ ಸಾಹಿತಿಗಳ ಅಗಣಿತ ಕೃತಿಗಳು ಹಾಗೂ ಭಾರತೀಯ ಭಾಷೆಗಳ ಮಹತ್ವದ ಗ್ರಂಥಗಳ ಅನುವಾದಿತ ಕೃತಿಗಳನ್ನು ಸಂರಕ್ಷಿಸಿಡಲಾಗಿದ್ದು,  ಸಂಪಾದಕೀಯಗಳು, ಆಸಕ್ತ ಸಾಹಿತ್ಯಾಭಿಮಾನಿಗಳ, ಸಂಶೋಧಕರು, ವಿದ್ವಾಂಸರುಗಳು, ವಿದ್ಯಾರ್ಥಿಗಳಿಗೆ ಬಳಕೆಗೆ ಇದನ್ನು ಒದಗಿಸಲಾಗುತ್ತಿದೆ.

ಇದರ ಪ್ರಯೋಜನ ಪಡೆದ ಸಾಕಷ್ಟು ಜನರು ಹೊಸ ವಿಚಾರಗಳ ಸಂಶೋಧನೆಗಳನ್ನು ನಡೆಸಿದ್ದಾರೆ ಎಂದರು.

ಧರ್ಮಸ್ಥಳ ಕ್ಷೇತ್ರದಿಂದ ಮಂಜುವಾಣಿ ಮಾಸ ಪತ್ರಿಕೆ ಹೊರತರಲಾಗುತ್ತಿದ್ದು, ಸಾಹಿತ್ಯಾಭಿರುಚಿ ಮೂಡಿಸಲಾಗುತ್ತಿದೆ. ನಿರಂತರ ಮಾಸ ಪತ್ರಿಕೆ ಮೂಲಕ ಕೃಷಿ ಹಾಗೂ ಅಲ್ಲಿನ ಜನರನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಎಂಟುವರೆ ಲಕ್ಷ ಪ್ರಸಾರ ಹೊಂದಿದೆ. ಅದನ್ನು ಹತ್ತು ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ‌. ಸಾಹಿತ್ಯ ಮತ್ತು ಬದುಕು ಒಂದೇ ಎಂದು ತಿಳಿದಿರುವ ಹೇಮಾವತಿ ಹೆಗ್ಗಡೆಯವರು ದೀನ ದುರ್ಬಲರಿಗೆ ಸಹಾಯವಾಗುವ ವಾತ್ಸಲ್ಯ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಇದರಿಂದ 11,820 ಮಂದಿಗೆ 9.23 ಕೋಟಿ ರೂ ಮಾಸಾಶನ ಕೊಡಲಾಗುತ್ತಿದೆ.

101 ಕೆರೆಗಳ ಹೂಳೆತ್ತಿ ದುರಸ್ಥಿ ಮಾಡಲಾಗಿದೆ. ಜ್ಞಾನತಾಣ ಕಾರ್ಯಕ್ರಮದಡಿ 11 ಸಾವಿರ ಟ್ಯಾಬ್ ಮತ್ತು 7 ಸಾವಿರ ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಗಿದೆ. ಸುಜ್ಞಾನ‌ ನಿಧಿ ಯೋಜನೆಯಡಿ 37,194 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿದೆ. 60 ಲಕ್ಷ‌ ಮಹಿಳೆಯರಿಗೆ ಸ್ವ ಉದ್ಯೋಗ, ನಾಗರಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗಿದೆ ಎಂದರು. ಕೊರೋನಾ ಕಾಲಘಟ್ಟದಲ್ಲಿ ಬಹುತೇಕರು ಪುಸ್ತಕ, ಪತ್ರಿಕೆಗಳನ್ನು ಮತ್ತೆ ಓದಲಾರಂಭಿಸಿದ್ದು ಅಭಿರುಚಿ ಹೆಚ್ಚಿದೆ. ಪತ್ರಿಕೆಗಳೂ ಕೂಡ ಸಾಹಿತ್ಯ ಸೇವೆಯಲ್ಲಿ ತೊಡಗಿದೆ. ಕೇವಲ ಸುದ್ದಿ ಸಮಾಚಾರಗಳನ್ನು ಬಿತ್ತರಿಸುವುದು ಮಾತ್ರವಲ್ಲದೆ ಮೌಲಿಖ ಲೇಖನಗಳು, ಚಿಂತನೆಗಳು, ಸಾಹಿತಿಗಳ ಪುಸ್ತಕ ಕೃತಿಗಳ ವಿಮರ್ಶೆ ಮುಂತಾದ ಸಕಾಲಿಕ ಬರಹಗಳ ಮೂಲಕ ಜ್ಞಾನಾರ್ಜನೆಯ ಸಾಧನಗಳಾಗಿವೆ.‌ ರೇಡಿಯೋ ಹಾಗೂ ದೂರದರ್ಶನಗಳಲ್ಲಿಯೂ ಯೋಗ, ಆಹಾರ, ಆರೋಗ್ಯ, ಸಾಹಿತಿಗಳೊಡನೆ ಸಂವಾದ ಸಮಾಜಮುಖಿ ಅನೇಕ ಕಾರ್ಯಕ್ರಮಗಳು ಜನರಿಗೆ ಉಪಯೋಗವುಂಟು ಮಾಡಿದೆ ಎಂದು ನೆನಪಿಸಿಕೊಂಡರು.

ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್,  ಶ್ರದ್ಧಾ ಅಮಿತ್ ಬೆಂಗಳೂರು, ರಾಜವರ್ಮ ಬಲ್ಲಾಳ್, ಡಾ.‌ಎಲ್.ಎಚ್. ಮಂಜುನಾಥ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಗಳಾದ ಕೃಷ್ಣ ಸಿಂಗ್ ಹಾಗೂ ಎ.ವೀರು ಶೆಟ್ಟಿ ಮೊದಲಾದವರು ಇದ್ದರು.

ಸನ್ಮಾನಿತರ ಅಭಿನಂದನಾ ಪತ್ರವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಯೋಜನಾ ನಿರ್ದೇಶಕ ಡಿ ಶ್ರೇಯಸ್ ಕುಮಾರ್ ಮತ್ತು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.‌ಶ್ರೀನಾಥ್ ಇವರು ವಾಚಿಸಿದರು. ಉಪನ್ಯಾಸಕರನ್ನು ಧರ್ಮಸ್ಥಳ ಕ್ಷೇತ್ರದ ಪರವಾಗಿ ಸ್ವಾಗತ ಸಮಿತಿ ಖಜಾಂಜಿ ಡಿ ಹರ್ಷೇಂದ್ರ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಸಮ್ಮೇಳನ ಉದ್ಘಾಟಕರು, ಅಧ್ಯಕ್ಷರು ಹಾಗೂ ಗಣ್ಯರನ್ನು ಹೆಗ್ಗಡೆಯವರ ಬೀಡಿನಿಂದ ಭವ್ಯ ಮೆರವಣಿಗೆಯ ಮೂಲಕ ಸಭಾ ಭವನದವರೆಗೆ ಕರೆತರಲಾಯಿತು. 

ಶೃಂಗಾರಗೊಂಡ ಆನೆ, ನಿಶಾನೆ, ಕೊಂಬು, ಕಹಳೆ, ಬ್ಯಾಂಡ್ ವಾದ್ಯಗಳ ಸಮ್ಮಿಳನದಲ್ಲಿ ಮೆರವಣಿಗೆಯ ಅಂದ ಹೆಚ್ಚಿಸಿತು.

ಡಾ. ಬಿ.ಪಿ‌ ಸಂಪತ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ ಸುರೇಶ್ ವಂದನಾರ್ಪಣೆಗೈದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment