Posts

ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮಲೆಬೆಟ್ಟು ನಿವಾಸಿಗೆ ವಸಂತ ಬಂಗೇರರಿಂದ ಗಾಲಿಕುರ್ಚಿ ಹಸ್ತಾಂತರ

0 min read

 


ಬೆಳ್ತಂಗಡಿ: ತಾಲೂಕಿನ ಮಲೆಬೆಟ್ಟು ನಿವಾಸಿ ಖಾಸೀಂ ಎಂಬವರು ಕಳೆದ ವರ್ಷ ರಿಕ್ಷಾ ಅಪಘಾತದಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು ಅವರ ಬೇಡಿಕೆ ಅನುಸರಿಸಿ ಮಾಜಿ ಶಾಸಕ  ಕೆ ವಸಂತ ಬಂಗೇರ ಅವರು ಅವರಿಗೆ ಗಾಲಿಕುರ್ಚಿ ಹಸ್ತಾಂತರಿಸಿದರು.


ಕಾಸಿಂ ಅವರು ಸಂಕಷ್ಟದಲ್ಲಿರುವ ವಿಚಾರ ಅರಿತ ಬಂಗೇರರು ಇತ್ತೀಚೆಗೆ ಅವರಿಗೆ ಸಾಂತ್ವನ ಹೇಳಿ ಅವರ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಟ್ಟಿದ್ದರು.

ಅವರ ಪುತ್ರನ ವಿಧ್ಯಾಭ್ಯಾಸಕ್ಕೆ ಅಗತ್ಯ ನೆರವು ಕಲ್ಪಿಸುವ ಹಾಗೂ ಆರೋಗ್ಯ ಸುಧಾರಣೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆಯನ್ನೂ ನೀಡಿದ್ದರು. 

ಅಂತೆಯೇ ಖಾಸೀಂರವರಿಗೆ ಈ  ಸಂದರ್ಭದಲ್ಲಿ ಪ್ರಮುಖರಾದ ದಿನೇಶ್ ಕೋಟ್ಯಾನ್, ಅನೂಪ್ ಬಂಗೇರ, ಪಾಪಣ್ಣ, ಭಗವಾನ್ ದಾಸ್, ಯೋಗಿಶ್ ಗೌಡ, ಮತ್ತಿತರ ಪ್ರಮುಖರು ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment