Posts

‌ನೆಲ್ಲಿಗುಡ್ಡೆ ಪ್ರದೇಶದವರಿಗಾಗಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

1 min read


ಪರಿಹಾರ ನೀಡಿದರೂ ಜಾಗ ಬಿಟ್ಟು ಹೋಗದ ಕುಟುಂಬಗಳಿಗೆ ಸರಕಾರಿ‌ ರಕ್ಷಣೆ!?

ಬೆಳ್ತಂಗಡಿ: ಮುಂದಿನ ದಿನಗಳಿಂದ ನಿರಂತರವಾಗಿ ಮಳೆ ಸುರಿಯುವ ಮುನ್ಸೂಚನೆಯಿದ್ದು, ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಿತ್ತಬಾಗಿಲು ಗ್ರಾಮದ ಜಿ.ನಗರ 32 ಕುಟುಂಬಗಳಿಗೆ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲು ಪುತ್ತೂರು ಸಹಾಯಕ ಆಯುಕ್ತ‌ ಡಾ. ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ.


ಮಿತ್ತಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರವನ್ನು ತೆರೆಯಲು ನಿರ್ಧರಿಸಿದ್ದು, ಈ ಪ್ರಯುಕ್ತ ಜು.16ರಂದು ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.

2019 ರಲ್ಲಿ ಉಂಟಾಗಿದ್ದ ನೆರೆ, ಭೂ ಕುಸಿತ ಘಟನೆಯ ಬಳಿಕ ಜಿ.ನಗರ ಪ್ರದೇಶವನ್ನೂ ಒಳಗೊಂಡ ಭೂ ಭಾಗದ ಮೇಲ್ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಭೂಮಿ ಬಾಯ್ದೆರೆದುಕೊಂಡಿದ್ದ ಪರಿಣಾಮ ವಿಜ್ಞಾನಿಗಳು ಈ ಭಾಗದಲ್ಲಿ ಪರಿಶೀಲನೆ ಕೈಗೊಂಡಿದ್ದರು. ಇಲ್ಲಿ ಭೂಮಿಯೊಳಗಿನಿಂದ ಅಪಾರ ಪ್ರಮಾಣದಲ್ಲಿ ನೀರಿನ ಒರತೆ ಕಂಡು ಬಂದಿದ್ದೂ ಮಾತ್ರವಲ್ಲದೆ ಅಂದು ಈ ಭಾಗದಲ್ಲಿ ಕಲ್ಲು, ಬಂಡೆಗಳ ಸಹಿತ ಕೃತಕ ತೋಡು ರಚನೆಯಾಗಿ ಏಕಾಏಕಿ ಭೂಮಿಯೊಳಗಡೆಯಿಂದ ನೀರು ಹರಿದುಬಂದಿತ್ತು. ಅದಾದ ಬಳಿಕ ಅಧಿಕಾರಿಗಳು ತೀರ್ಮಾನಕ್ಕೆ ಬಂದು ಈ ಭಾಗದ ನೆಲ್ಲಿಗುಡ್ಡೆ ಪ್ರದೇಶದಲ್ಲಿ ಭವಿಷ್ಯದಲ್ಲಿ ಭಾರೀ ಭೂಕುಸಿತವಾಗುವ ಸಾಧ್ಯತೆ ಇರುವ ಅಪಾಯಕಾರಿ ಪ್ರದೇಶವೆಂದು ತೀರ್ಮಾನಕ್ಕೆ ಬರಲಾಗಿತ್ತು. ಇಲ್ಲಿನ ಎಲ್ಲಾ 32 ಕುಟುಂಬಗಳನ್ನೂ ಇಲ್ಲಿಂದ ಶಾಶ್ವತವಾಗಿ ಸ್ಥಳಾಂತರಿಸುವಂತೆ ಆದೇಶ ಮಾಡಲಾಗಿತ್ತು.

ಅಲ್ಲಿನ ಎಲ್ಲಾ ಕುಟುಂಬಗಳಿಗೂ ಸರಕಾರ ಪ್ಯಾಕೇಜ್ ಮಾಡಿ‌ ತಲಾ 5 ಲಕ್ಷ ರೂ.ಗಳಂತೆ ಪುನರ್ವಸತಿ ಮೊತ್ತ ಘೋಷಿಸಿತ್ತು. ಅಲ್ಲದೆ ಅವರಿಗೆ ಮನೆ ಕಟ್ಟಿಕೊಳ್ಳಲು ಪರ್ಯಾಯ ಸ್ಥಳವನ್ನೂ ತೋರಿಸಿಕೊಡಲಾಗಿತ್ತು. ಅದಾಗ್ಯೂ ಕೂಡ ಕೆಲವು ಕುಟುಂಬಗಳು ಇ‌ನ್ನೂ ಕೂಡ ಈ ನಿಷೇಧಿತ‌ ಪ್ರದೇಶದಲ್ಲೇ ನೆಲೆನಿಂತಿದ್ದು ಅವರ ಬಗ್ಗೆ ಸರಕಾರ ಕಾನೂನಾತ್ಮಕವಾಗಿ ಕ್ರಮ‌ಕೈಗೊಳ್ಳುವ ಅವಕಾಶವಿದ್ದರೂ ಇನ್ನೂ ಕೂಡ ಈ‌ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ವಿಶೇಷ.‌ ಪ್ರತೀ‌ ಮಳೆಗಾಲ ಬಂದಾಗಲೂ ಅಲ್ಲಿನ ನಿವಾಸಿಗಳಿಗಾಗಿ ಕಾಳಜಿ ಕೇಂದ್ರ‌ತೆರೆಯುವುದೇ ಸರಕಾರ ಮತ್ತು ತಾಲೂಕು ಆಡಳಿತದ ಜವಾಬ್ದಾರಿ ಎಂಬಂತೆ ಕೆಲಸ ಮಾಡುತ್ತಾ ಬರುತ್ತಿದೆ. ಇದೀಗ 2021 ರಲ್ಲಿ ಮತ್ತೆ ಅದೇ ಹಳೇ ನೀತಿಗೆ ಮಣೆ ಹಾಕಿದಂತಿದೆ. ಕಳೆದ ಮೂರು ದಿನಗಳಿಂದ ಮಳೆಯ ಪ್ರಮಾಣ‌ ಅಧಿಕವಾಗಿರುವುದರಿಂದ ಮತ್ಯೊಮ್ಮೆ ಇಲ್ಲಿನ‌ ನಿವಾಸಿಗಳಿಗೆ ಕಾಳಜಿ ಕೇಂದ್ರ ತೆರೆಯುವ ಜೆಚ್ಚುವರಿ ಹೊಣೆಗಾರಿಕೆಗೆ ಕೈ ಹಾಕಿದೆ. ಪುತ್ತೂರು ಉಪವಿಭಾಗದ ಎಸಿ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ಸಭೆ ನೇದಿದ್ದು, ಅಲ್ಲಿನ ಪ್ರದೇಶಕ್ಕೆ ಅನುಕೂಲವಿರುವ  ಕುಕ್ಕಾವು ಸರಕಾರಿ ಶಾಲೆಯನ್ನು ಗುರುತಿಸಿದೆ. ಅಲ್ಲಿಗೆ ಭೇಟಿ ನೀಡಿದ ತಂಡ ಅಲ್ಲಿನ ನೀರಿನ ವ್ಯವಸ್ಥೆ, ಮತ್ತು ಲಭ್ಯತೆ, ಅಡುಗೆ ಕೋಣೆ, ಶೌಚಾಲಯ ಹಾಗೂ ಇತರ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರದ ನೋಡೆಲ್ ಅಧಿಕಾರಿಗಳಾದ ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.  ರವಿಕುಮಾರ್, ಪಶು ಪರಿವೀಕ್ಷಣಾಧಿಕಾರಿ ಡಾ. ಜಯಕೀರ್ತಿ ಜೈನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹೆಚ್.ಬಿ, ಗ್ರಾಮ ಕರಣಿಕ ಸತೀಶ್, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷೆ ಲತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಸ್ಮಾನ್, ಸಿಆರ್‌ಪಿ ಪ್ರಶಾಂತ್, ಶಾಲಾ ಮುಖ್ಯ ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment