ಬೆಳ್ತಂಗಡಿ: ಧರ್ಮಸ್ಥಳ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪವನ್ ನಾಯ್ಕ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೂತನವಾಗಿ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯೋಜಿತರಾದ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರು ಜು.16 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ವೇಣೂರು ಠಾಣೆಯಲ್ಲಿ ಪ್ರೊಬೆಷನರಿ ಅವಧಿ ಮುಗಿಸಿದ ಕೃಷ್ಣಕಾಂತ್ ಅವರನದನ್ನು ನಿನ್ನೆಯಷ್ಟೇ ಧರ್ಮಸ್ಥಳ ಠಾಣೆಗೆ ನೇಮಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ. (ಐಪಿಎಸ್) ಆದೇಶ ಹೊರಡಿಸಿದ್ದರು.
ಧರ್ಮಸ್ಥಳ ಠಾಣೆಯ ಇನ್ನೋರ್ವ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ ಅವರು ನೂತನ ಎಸ್.ಐ ಅವರನ್ನು ಹೂಗುಚ್ಚ ನೀಡಿ ಬರಮಾಡಿಕೊಂಡರು.
ಈ ಸಂದರ್ಭ ಎಎಸ್‌ಐ ಬಾಲಕೃಷ್ಣ, ಠಾಣಾ ಬರಹಗಾರ ವಿಶ್ವನಾಥ ನಾಯ್ಕ, ಹೆಡ್ ಕಾನ್ಸ್‌ಟೇಬಲ್ ಗಳಾದ ರವೀಂದ್ರ, ಅಸ್ಲಂ, ರಾಹುಲ್ ಮತ್ತು ಕೃಷ್ಣಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.