ಬೆಳ್ತಂಗಡಿ; ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರೀದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಹಾಗೂ ಅಗಲಿದ ಗಣ್ಯರ ಸ್ಮರಣೆ ಹಾಗೂ ಖುರಾನ್ ಪಾರಾಯಣ ಸಮರ್ಪಣೆ ನಡೆಯಿತು.
ಖತೀಬ್ ಇಬ್ರಾಹಿಂ ಸಖಾಫಿ ಕಬಕ ಖುತುಬಾ ಪಾರಾಯಣಕ್ಕೆ,ಬಕ್ರೀದ್ ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸರಕಾರದ ಕೋವಿಡ್ ನಿಯಮಾವಳಿ ಹಾಗೂ ಮಸೀದಿ ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಂತೆ ಕಾರ್ಯಕ್ರಮ ನಡೆಯಿತು.
ಪ್ರಾರ್ಥನೆಯ ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ನೃತೃತ್ವದ 'ಸಹಾಯ್' ಸನ್ನದ್ದ ಸೇವೆಯ ತಂಡಕ್ಕೆ ದೇಣಿಗೆ ಸಂಗ್ರಹಿಸಿ ಸಮರ್ಪಿಸಲಾಯಿತು. ಮರ್ಹೂಮ್ ಕಾಜೂರು ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಕುಟುಂಬಸ್ತರು, ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾರ್ಥಿ ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್,ಆಡಳಿತ ಸಮಿತಿ ಪದಾಧಿಕಾರಿಗಳು, ಎಂಡಿಸಿ ಗಲ್ಫ್ ಕಮಿಟಿ, ಸುನ್ನೀ ಸಂಘ ಕುಟುಂಬಗಳಾದ ಎಸ್‌ವೈಎಸ್, ಎಸ್ಸೆಸ್ಸೆಫ್, ಎಸ್‌ಬಿಎಸ್ ಸಮಿತಿಗಳ ಪದಾಧಿಕಾರಿಗಳು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.