Posts

ನವದೆಹಲಿಯ ಲಿಟ್ಲ್ ಫ್ಲವರ್ ಕ್ರೈಸ್ತ ದೇವಾಲಯ ಧ್ವಂಸ ಖಂಡನೀಯ; ಕೆಎಸ್ಎಮ್‌ಸಿಯೆ ಹೇಳಿಕೆ

0 min read

ಬೆಳ್ತಂಗಡಿ; ನವದೆಹಲಿಯ ಅಂದೆರಿ ಮೋಡ್ ನ ಲಡೋ ಸರಾಯ್  ಲಿಟ್ಲ್ ಫ್ಲವರ್ ದೇವಾಲಯವನ್ನು ಅಲ್ಲಿಯ  ಸ್ಥಳೀಯಾಡಳಿತವು ಯಾವುದೇ ಪೂರ್ವತಯಾರಿಗೆ ಅವಕಾಶ ನೀಡದೆ ಬಲವಂತವಾಗಿ ಧ್ವಂಸಗೊಳಿಸಿ ದೇವಾಲಯದ ಪೂಜ್ಯ ವಸ್ತುಗಳನ್ನು ಹಾಗೂ ದೇವಾಲಯವನ್ನು ಅಪವಿತ್ರಗೊಳಿಸಿರುವುದು ದುರದೃಷ್ಟಕರ. 

ಇದನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಶ್ರೀ ಸಾಮಾನ್ಯರ ಸಂಘಟನೆ ಯಾದ  ಕರ್ನಾಟಕ ಸಿರೋಮಲಬಾರ್ ಕ್ಯಾಥೋಲಿಕ್  

ಆಸೋಸಿಯೇಶನ್( ರಿ) ತೀವ್ರವಾಗಿ ಖಂಡಿಸುತ್ತದೆ. ಇದು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದ್ದು, ಸ್ಥಳೀಯಾಡಳಿತದ ಈ ರೀತಿಯ ಪಕ್ಷಪಾತಿ ಧೋರಣೆಯನ್ನು ನಾವು ವಿರೋಧಿಸುತ್ತೇವೆ. ಹಾಗೂ ಘಟನೆಯ ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ.


ಅಧ್ಯಕ್ಷರು; ಕೆಎಸ್ಎಂಸಿಎ

ಬೆಳ್ತಂಗಡಿ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment