Posts

ಸಹಾಯ್ ಮಡಂತ್ಯಾರು ಸೆಂಟರ್ ವತಿಯಿಂದ ಮಾಲಾಡಿ ಸೀಲ್‌ಡೌನ್ ಪ್ರದೇಶದ ಅರ್ಹರಿಗೆ ಕಿಟ್ ವಿತರಣೆ

0 min read

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್‌ ಇದರ ಅಧೀನದಲ್ಲಿ ಎಸ್‌ವೈಎಸ್, ಎಸ್ಸೆಸ್ಸೆಫ್, ಕೆಸಿಎಫ್ ಸಹಯೋಗದೊಂದಿಗೆ ರಾಜ್ಯಾದ್ಯಂತ  ಕೋವಿಡ್ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ "ಸಹಾಯ್" ಇದರ ಮಡಂತ್ಯಾರು ಸೆಂಟರ್ ವತಿಯಿಂದ ಸೀಲ್‌ಡೌನ್ ಆಗಿರುವ ಮಾಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಣಕಜೆ - ಮುಂಡಾಡಿಯ ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ಅನ್ನು ಬುಧವಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಡಂತ್ಯಾರು ಸೆಂಟರ್ "ಸಹಾಯಿ" ಅಮೀರ್ ಜಮಾಲುದ್ದೀನ್ ಲತೀಫಿ , ಕರ್ನಾಟಕ ಮುಸ್ಲಿಂ ಜಮಾಅತ್‌ ಬೆಳ್ತಂಗಡಿ ತಾ. ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ , ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಎಸ್ಸೆಸ್ಸೆಫ್ ಸೆಕ್ಟರ್ ನಾಯಕ ರಫೀಕ್ ಮಡಂತ್ಯಾರ್ ಮುಂತಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment